Tuesday, April 15, 2025

Latest Posts

ಗಣಪತಿ ವಿಸರ್ಜನೆಗೆ ಡಿಜೆ ಬ್ಯಾನ್; ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರ್ ಖಡಕ್ ವಾರ್ನಿಂಗ್

- Advertisement -

ಹುಬ್ಬಳ್ಳಿ :ಗಣೇಶೋತ್ಸವ ಬಂತಂದ್ರೆ ಸಾಕು ಎಲ್ಲಿಲ್ಲದ ಸಡಗರ, ಸಂಭ್ರಮ. ಹಿಂದೂಗಳ ಬಹುದೊಡ್ಡ ಹಬ್ಬವೇ ಈ ಗಣೇಶ ಚತುರ್ಥಿ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅತಿದೊಡ್ಡ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ‌ಹುಬ್ಬಳ್ಳಿ ಗಣಪತಿ ನೋಡುವುದಕ್ಕೆ ಬೇರೆ ಬೇರೆ ಪ್ರದೇಶ ಸಾವಿರಾರು ಜನರು ಬರುತ್ತಾರೆ. ಆದ್ರೆ ಈ ಬಾರಿ ಡಿಜೆ ಹಚ್ಚುವುದಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್  ಬ್ಯಾನ್ ಮಾಡಿದ್ದಾರೆ.

ಹೌದು,,, ನ್ಯಾಯಾಲಯದ ಪ್ರಕಾರ ಡಿಜೆ ಹಚ್ಚುವುದಿಲ್ಲ, ಕೇವಲ ಡೊಳ್ಳು, ಜಾಂಜು ಮಜಲು, ತಮಟೆ ಮೂಲಕ ಸಾರ್ವಜನಿಕ ಗಣಪತಿಗಳನ್ನು ಕಳಿಸಬೇಕೆಂದು ಆದೇಶ ಮಾಡಿದಂತೆ. ಅದಕ್ಕಾಗಿ ಈ ಬಾರಿ ಹುಬ್ಬಳ್ಳಿಯ 11 ದಿನದ ಸಾರ್ವಜನಿಕ ಗಣಪತಿ ವಿಸರ್ಜನೆ ವೇಳೆ ಡಿಜೆ ಹಚ್ಚಲು ಅವಕಾಶ ಮಾಡಿಕೊಡಲ್ಲಾ, ಒಂದು ವೇಳೆ ಯಾರಾದ್ರು ಡಿಜೆ ಹಚ್ಚಿದ್ರೆ ಕೂಡಲೆ ಆ ಡಿಜೆಯನ್ನು ಸೀಜ್ ಮಾಡಲಾಗುತ್ತದೆಂದು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಖಡಕ್ ವಾರ್ನ್ ಮಾಡಿದ್ದಾರೆ.

ಒಟ್ನಲ್ಲಿ ಹೇಳಬೇಕೆಂದ್ರೆ ಹುಬ್ಬಳ್ಳಿಯ ಸಾರ್ವಜನಿಕ ಗಣಪತಿ ವಿಸರ್ಜನೆಗಳ ವೇಳೆ ಪೊಲೀಸ್ ಇಲಾಖೆ ಡಿಜೆ  ಬ್ಯಾನ್ ಮಾಡಿದ್ದಾರೆ. ಇದಕ್ಕೆ ಹುಬ್ಬಳ್ಳಿಯ ಗಜಾನನ ಮಂಡಳಿ ಯಾವ ರೀತಿ ಸಹಕಾರ ನೀಡುತ್ತದೆಂದು ಕಾಯ್ದು ನೋಡಬೇಕಿದೆ.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.

ಗಣಪತಿಗೆ ಗಣಹೋಮ ಮಾಡಿಸಿದ ಮುಸ್ಲಿಂ ಯುವಕ: ನಾವೆಲ್ಲರೂ ಒಂದೇ..!

Shakthi yojane century; ಶಕ್ತಿ ಯೋಜನೆಯ ಶತದಿನದ ಸಂಭ್ರಮ ಹಂಚಿಕೊಂಡ ಸಿಎಂ..!

Ganesha: ಈದ್ಗಾ ಗಣಪತಿಗೆ ವಿದಾಯ: ವಿಸರ್ಜನೆಗೊಂಡ ವಿಘ್ನೇಶ್ವರ..!

- Advertisement -

Latest Posts

Don't Miss