ದಕ್ಷಿಣ ಕೋರಿಯಾ: ವಯಸ್ಸಿಗೆ ಬಂದ ಮಗಳ ಮೇಲೆ ಪೋಷಕರು ಯಾವಾಗಲೂ ಎಂದು ಕಣ್ಣಿಟ್ಟಿರುತ್ತಾರೆ ಅದು ಆಕೆಯ ಮೇಲಿನ ಅನುಮಾನದಿಂದಲ್ಲ ಸಮಾಜಕ್ಕೆ ಹೆದರಿ. ಮಗಳಿಗೆ ಮಗಳು ಎಲ್ಲಿಯಾದರೂ ಹೋದರೆ ವಾಪಸ್ಸು ಮನೆಗೆ ಹಿಂದಿರುಗುವವರೆಗೆ ಪೋಷಕರಿಗೆ ಆತಂಕ ಹಾಗಾಗಿ ಆಗಾಗ ಮಗಳಿಗೆ ಕರೆಮಾಡಿ ಎಲ್ಲಿದ್ದೀಯಾ ಏನು ಮಾಡುತ್ತಿದ್ದಿಯಾ ಎಂದು ವಿಚಾರಣೆ ಮಾಡುತ್ತಿರುತ್ತಾರೆ, ಆದರೆ ಈ ರೀತಿ ಮಾಡಿದ ತಾಯಿಗೆ ಈಗ ಸಂಕಟ ಶುರುವಾಗಿದೆ.
ಅದೇನೆಂದರೆ ದಕ್ಷಿಣ ಕೋರಿಯಾದ 50 ವರ್ಷದ ಮಹಿಳೆಯೊಬ್ಬಳು ತನ್ನ ಮಗಳು ಎಲ್ಲಿಗಾದರೂ ಹೊರಗಡೆ ಹೋದಾಗ ಆಗಾಗ ಕರೆಮಾಡಿ ಎಲ್ಲಿದ್ದೀಯಾ ಏನು ಮಾಡುತ್ತಿದ್ದಿಯಾ ಎಂದು ವಿಚಾರಿಸುತ್ತಿದ್ದಳು ಹಾಗೂ ಹಲವು ಸಲ ಮಗಳಿಗೆ ತಿಳಿಯದಂತೆ ಅವಳನ್ನು ಹಿಂಬಾಲಿಸುತ್ತಿದ್ದಳು ಇದರಿಂದ ಮಾನಸಿಕ ನೋವು ಅನುಭವಿಸುತ್ತಿರುವ ಮಗಳು ಠಾಣೆಗೆ ತಾಯಿಯ ವಿರುದ್ದ ದೂರು ನೀಡಿದ್ದಾಳೆ, ದೂರನ್ನು ದಾಖಸಿಲಿಕೊಂಡ ಪೊಲೀಸರು ತಾಯಿಗೆ 6 ತಿಂಗಳ ಕಾಲ ಸೆರೆವಾಸದ ಶಿಕ್ಷೆ ನೀಡಿದೆ.
ದಕ್ಷಿಣಕೋರಿಯಾದ ಕಾನೂನಿನ ಪ್ರಕಾರ ಹಿಂಬಾಲಿಸುವ ವ್ಯಕ್ತಿಗೆ 30 ಮಿಲಿಯನ್ ವೊನ್(ರೂ. 18,78,008) ದಂಡ ಹಾಗೂ ಗರಿಷ್ಟ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು, ಒಂದು ವೇಳೆ ಮಾರಕಾಸ್ತ್ರ ಸಮೇತ ಯಾರನ್ನಾದರೂ ಹಿಂಬಾಲಿಸುತ್ತಿದ್ದರೆ ಅಂತವರಿಗೆ 50 ಮಿಲಿಯನ್ ವೊನ್(31.25 ಲಕ್ಷ ) ದಂಡದ ಜೊತೆಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುತ್ತಾರೆ ಅದೇ ರೀತಿ ಈಗ ಈ ತಾಯಿಗೆ 6 ತಿಂಗಳ ಸೆರೆವಾಸದ ಶಿಕ್ಷೆ ನೀಡಿದ್ದಾರೆ.
Special Game : ಪಾಕಿಸ್ತಾನದ ಮಹಾ ಕುತಂತ್ರವೇನು..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
Mantralaya visit: ಮಂತ್ರಾಲಯ ರಾಯರ ದರ್ಶನ ಪಡೆದ ರಿಶಿ ಸುನಕ್ ತಂದೆ ತಾಯಿ..!