Friday, November 22, 2024

Latest Posts

ದಕ್ಷಿಣ ಕೊರಿಯಾ ಗಡಿಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

- Advertisement -

ಸಿಯೋಲ್: ಇಂದು ಬೆಳಗ್ಗೆ ಉತ್ತರದ ಪೂರ್ವದ ಸಮುದ್ರದ ಗಡಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಲಾಗಿದ್ದು, ಇವು ಗಡಿಗೆ ಬಂದು ಅಪ್ಪಳಿಸಿವೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ. ಗಡಿ ಶಾಂತಿ ಒಪ್ಪಂದವನ್ನು ಉತ್ತರ ಕೊರಿಯಾ ಪದೆ ಪದೆ ಮೀರುತ್ತಿದೆ. ಇತ್ತೀಚಿಗೆ 5 ಡ್ರೋನ್​ಗಳು ದಕ್ಷಿಣ ಕೊರಿಯಾದ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದ್ದವು. ಇದೀಗ ಕ್ಷಿಪಣಿಗಳನ್ನು ಹಾರಿಸಿರುವ ನಿರಂಕುಶಾಧಿಕಾರಿ ಕಿಮ್​ ಜಾಂಗ್​ ಉನ್​ ಸರ್ಕಾರ ಮತ್ತೆ ಗಡಿ ಶಾಂತಿಯನ್ನು ಕದಡಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಕೃಷ್ಣಾ ಜಲಾನಯನ ಪ್ರದೇಶದ ರೈತರಿಗೆ ಬಿಜೆಪಿ ಸರ್ಕಾರ ದ್ರೋಹ ಮಾಡುತ್ತಿದೆ : ಸಿದ್ದರಾಮಯ್ಯ

ಉತ್ತರ ಕೊರಿಯಾ ತನ್ನ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸಲು ಮತ್ತು ಅಮೆರಿಕದ ಜೊತೆಗಿನ ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ಈ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಭವಿಷ್ಯದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದುವ ಕಾರಣಕ್ಕಾಗಿ ಅದು ಹೀಗೆ ಮಾಡುತ್ತಿದೆ ಎಂದು ಹೇಳಿದ್ದಾರೆ. 2017ರಿಂದ ಕೊರಿಯಾ ರಾಷ್ಟ್ರಗಳ ಮಧ್ಯೆ ಶಾಂತಿ ಸ್ಥಾಪಿಸಿಕೊಂಡು ಬರಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೀಗ ಉತ್ತರ ಕೊರಿಯಾ ಹುಚ್ಚಾಟ ನಡೆಸುತ್ತಿದೆ. ಈ ಹಿಂದೆಯೂ ಉತ್ತರ ಕೊರಿಯಾದ ಕ್ಷಿಪಣಿಗಳು ದಕ್ಷಿಣ ಕೊರಿಯಾದ ಗಡಿ ಬಳಿ ಸ್ಫೋಟಿಸಿದ್ದವು. ಡಿಸೆಂಬರ್​ 26 ರಂದು ವಾಯುಪ್ರದೇಶವನ್ನು ಉಲ್ಲಂಘಿಸಿ ಬಂದ ಉತ್ತರ ಕೊರಿಯಾದ 5 ಡ್ರೋನ್​ಗಳನ್ನು ದಕ್ಷಿಣ ಕೊರಿಯಾದ ಸೇನೆ ಪತ್ತೆ ಮಾಡಿತ್ತು.

ತಾಯಿ ಕಳೆದಕೊಂಡ ನೋವಿನಲ್ಲೂ ಪಂತ್ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು; ಪೊಲೀಸ್ ಬಿಗಿ ಭದ್ರತೆ

- Advertisement -

Latest Posts

Don't Miss