Friday, November 22, 2024

Latest Posts

ಬೆಂಗಳೂರು ವಿಭಾಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

- Advertisement -

bengalore stories

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇಂದು (11.03.2023) ಮಹಾತ್ಮಾ ಗಾಂಧಿ ರೈಲ್ವೆ ಕಾಲೋನಿಯ ‘ಅನುಗ್ರಹ’ ರೈಲ್ವೆ ಸಮುದಾಯ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿತು.

ಖ್ಯಾತ ನಟಿ ಮೇಘನಾ ರಾಜ್ ಮುಖ್ಯ ಅತಿಥಿಯಾಗಿದ್ದರು. ಚಲನಚಿತ್ರ ನಿರ್ದೇಶಕ ಶ್ರೀ ಪನ್ನಗಾಭರಣ ಮತ್ತು ಸಿನಿ ನಿರ್ಮಾಪಕ ಚೇತನ್ ನಂಜುಂಡಯ್ಯ ಅವರು ವಿಶಿಷ್ಟ ಅತಿಥಿಗಳಾಗಿದ್ದರು. ಶ್ರೀಮತಿ, ಶಿಲ್ಪಿ ಸಿಂಗ್, ಬೆಂಗಳೂರು ವಿಭಾಗೀಯ ಅಧ್ಯಕ್ಷರು, ನೈಋತ್ಯ ರೈಲ್ವೆ, ಮಹಿಳಾ ಕಲ್ಯಾಣ ಸಂಸ್ಥೆ (SWRWWO) ಗೌರವ ಅತಿಥಿಯಾಗಿದ್ದರು. ಶ್ರೀ ಶ್ಯಾಮ್ ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ವಿಶೇಷ ಅತಿಥಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಮೇಘನಾ ರಾಜ್, ಮಹಿಳಾ ಸಬಲೀಕರಣಕ್ಕಾಗಿ ಬೆಂಗಳೂರು ವಿಭಾಗದ ಪ್ರಯತ್ನವನ್ನು ಶ್ಲಾಘಿಸಿದರು.

ಮಹಿಳಾ ದಿನಾಚರಣೆ ಅಂಗವಾಗಿ ವಿಭಾಗದ ಮಹಿಳಾ ಉದ್ಯೋಗಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶ್ರೀಮತಿ ಶಿಲ್ಪಿ ಸಿಂಗ್ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಂಗಳೂರು ವಿಭಾಗದ ಸಿಬ್ಬಂದಿಗಳಾದ ಮೇಘನಾ ಸಜ್ಜನರ್ ಮತ್ತು ಪ್ರೀನು ಯಾದವ್ ಅವರನ್ನು ಸನ್ಮಾನಿಸಲಾಯಿತು.

ರೈಫಲ್ ಶೂಟಿಂಗ್‌ಗಾಗಿ 2022 ರ ಅಕ್ಟೋಬರ್‌ನಲ್ಲಿ ಈಜಿಪ್ಟ್‌ನಲ್ಲಿ ನಡೆದ ISSF (ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೇಘನಾ ಸಜ್ಜನರ್ ಕಂಚಿನ ಪದಕವನ್ನು ಪಡೆದಿದ್ದಾರೆ. ಪ್ರೀನು ಯಾದವ್ ಅವರು 2020 ರಲ್ಲಿ ನಾಗಾಲ್ಯಾಂಡ್‌ನಲ್ಲಿ ನಡೆದ SAAF (ದಕ್ಷಿಣ ಏಷ್ಯಾದ ಅಥ್ಲೆಟಿಕ್ ಫೆಡರೇಶನ್) ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಕಂಚು ಮತ್ತು ತಂಡದ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಭರತನಾಟ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಶ್ರೀಮತಿ ಕುಸುಮಾ ಹರಿಪ್ರಸಾದ್ ಸ್ವಾಗತಿಸಿದರು ಮತ್ತು ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಶ್ರೀಮತಿ ಉಮಾ ಶರ್ಮಾ ವಂದಿಸಿದರು.

ಮುಖ್ಯಮಂತ್ರಿ ಆಗುವ ಆಸೆ ತೋರಿದ ಸಾರಿಗೆ ಸಚಿವ ಶ್ರೀರಾಮುಲು

ಮದುವೆಯಾದ್ರಾ ? ನರೇಶ್ ಮತ್ತು ಪವಿತ್ರಾ ಲೋಕೇಶ್

ಇಬ್ಬರ ಹೆಂಡಿರ ಮುದ್ದಿನ ಗಂಡ, ಮೊದಲು ಮಕ್ಕಳು ನಂತರ ಮದುವೆ

- Advertisement -

Latest Posts

Don't Miss