ಧರ್ಮಸ್ಥಳ ಬುರುಡೆ ಗ್ಯಾಂಗ್‌ಗೆ ಈಗ ಢವಢವ ಶುರುವಾಗಿದೆ. ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದು ಯಾರು ತನಿಖೆಯಲ್ಲಿ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಸೌಜನ್ಯ ಮಾವ ವಿಠಲ ಗೌಡ ಅವರೇ ಬುರುಡೆ ತಂದು ಕೊಟ್ಟಿದ್ದು ಅನ್ನೋ ಅನುಮಾನ ದಟ್ಟವಾಗಿದೆ. ಚಿನ್ನಯ್ಯ, ಮಟ್ಟಣ್ಣವರ್ ಹೇಳಿಕೆ ಆಧರಿಸಿ, ವಿಠಲಗೌಡನನ್ನ
ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗಿದೆ.
ಕಳೆದ ಸೆಪ್ಟೆಂಬರ್ 6ರ ಶನಿವಾರ ಕೂಡ, ನೇತ್ರಾವತಿ ಅರಣ್ಯ ಪ್ರದೇಶ ಮತ್ತು ನದಿ ತೀರದಲ್ಲಿ, ವಿಠಲ ಗೌಡನನ್ನು ಕರೆದುಕೊಂಡು ಹೋಗಲಾಗಿತ್ತು. 9, 10, 11, 12ನೇ ಪಾಯಿಂಟ್ ಬಳಿ ಮಹಜರು ಮಾಡಲಾಗಿದೆ. ಬಳಿಕ ಬಂಗ್ಲೆಗುಡ್ಡಕ್ಕೂ ಕರೆದುಕೊಂಡು ಹೋಗಲಾಗಿದೆ. ಆ ವೇಳೆ ಸಿಕ್ಕಿದ್ದ ಮೂಳೆಗಳನ್ನು ಸಂಗ್ರಹಿಸಲಾಗಿದೆ.
ಬಂಗ್ಲೆಗುಡ್ಡದಲ್ಲಿ ಇನ್ನಷ್ಟು ಅಸ್ಥಿಪಂಜರಗಳು ಇರೋದಾಗಿ ವಿಠಲ ಗೌಡ ಹೇಳಿದ್ದಾರಂತೆ. ಹೀಗಾಗಿ ಇಂದೂ ಕೂಡ ಮಹಜರು ನಡೆಸಲಾಗ್ತಿದೆ. ಮಹಜರು ಬಳಿಕ ಮೂಳೆಗಳನ್ನು ಫಾರೆನ್ಸಿಕ್ ಟೀಂ, ವಶಕ್ಕೆ ಪಡೆಯೋ ಸಾಧ್ಯತೆ ಇದೆ.
ನಿಗೂಢ ಸಾವುಗಳ ವಿಚಾರವಾಗಿ ಆರಂಭವಾದ ತನಿಖೆ, ಅಂತಿಮವಾಗಿ ವಿಠಲ್ ಗೌಡ ಬಳಿ ಬಂದು ನಿಂತಿದೆ. ಪ್ರದೀಪ್ ಗೌಡ ಎಂಬಾತನ ಜೊತೆ ಹೋಗಿ, ಬಂಗ್ಲೆಗುಡ್ಡದಿಂದಲೇ ತಲೆಬುರುಡೆ ತಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಸೆಪ್ಟೆಂಬರ್ 9ರ ಮಹಜರು ಬಳಿಕ ಸೌಜನ್ಯ ಮಾವ ವಿಠಲ್ ಗೌಡನನ್ನ, ಬಂಧಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ ಸೌಜನ್ಯ ಕೊಲೆ ಮಾಡಿದ್ದು, ಆಕೆಯ ಮಾವ ವಿಠಲ್ ಗೌಡ ಅಂತಾ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಎಸ್‌ಪಿ ಅರುಣ್ ಕುಮಾರ್‌ಗೆ ದೂರು ಸಲ್ಲಿಸಿದ್ದಾರೆ.
ಸೌಜನ್ಯ ಮೇಲೆ ಸೋದರ ಮಾವ ವಿಠಲ ಗೌಡಗೆ ಕೆಟ್ಟ ದೃಷ್ಟಿ ಇತ್ತು. ಆಕೆಯನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದ. ಒಪ್ಪದೇ ಇದ್ದಾಗ ಆಕೆ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ. ಸಾಂದರ್ಭಿಕ ಸಾಕ್ಷಿಗಳನ್ನು ಇಟ್ಟುಕೊಂಡು, ತನಿಖೆ ನಡೆಸಿ. ವಿಠಲ ಗೌಡನ ಮಂಪರು ಪರೀಕ್ಷೆ ಮಾಡಿ ಅಂತಾ, ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.




