Saturday, March 2, 2024

Latest Posts

ಇಂದು ಮತ್ತಷ್ಟು ಶಾಸಕರು ರಾಜೀನಾಮೆ..!

- Advertisement -

ಬೆಂಗಳೂರು : ದೋಸ್ತಿ ಸರ್ಕಾರದ ಶಾಸಕರ ಸಾಲುಸಾಲು ರಾಜೀನಾಮೆ ಪರ್ವ ದು ಮುಂದುವರೆಯುವ ಸಾಧ್ಯತೆ ಇದೆ.. ನಿನ್ನೆಯಷ್ಟೆ ಡಾ. ಸುಧಾಕರ್, ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಇಂದು ಜಯನಗರ ಶಾಸಕಿ ಸೌಮ್ಯ ರಾಮಲಿಂಗಾರೆಡ್ಡಿ, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ತಂದೆ ಹಾದಿಯಲ್ಲೇ ಸಾಗಲಿದ್ದಾರೆ ಸೌಮ್ಯ ರಾಮಲಿಂಗಾರೆಡ್ಡಿ..!

ಮೊನ್ನೆ ಕಾಂಗ್ರೆಸ್-ಜೆಡಿಎಸ್ ಶಾಸಕರು ಸಾಮೂಹಿಕ ರಾಜೀನಾಮೆ ಕೊಟ್ಟ ದಿನ ಕಡೆಯದಾಗಿ ಬಂದು ರಾಮಲಿಂಗಾರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.. ಅಂದೇ ಸೌಮ್ಯ ಕೂಡ ರಾಜೀನಾಮೆ ನೀಡ್ತಾರೆ ಅಂತ ಹೇಳಲಾಗ್ತಿತ್ತು.. ಆದ್ರೆ ಮರು ದಿನ ದೆಹಲಿಗೆ ತೆರಳಿ ಸೋನಿಯಾಗಾಂಧಿ ಭೇಟಿ ಮಾಡಿದ ಸೌಮ್ಯ ತಮ್ಮತಂದೆಯಾಕೆ ರಾಜೀನಾಮೆ ನೀಡಿದ್ರು ಅಂತ ಸೋನಿಯಾಗಾಂಧಿಗೆ ಮನವರಿಕೆ ಮಾಡಿಕೊಟ್ಟು ಬಂದಿದ್ರು.. ಮರು ದಿನ ಸೌಮ್ಯ ರಾಜೀನಾಮೆ ನೀಡ್ತಾರೆ ಅಂತ ಹೆಳಾಗ್ತಿತ್ತು.. ಆದ್ರೆ, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗಿಯಾಗಿ ನಾನು ಕಾಂಗ್ರೆಸ್ ಬಿಡೋದಿಲ್ಲಅಂತ ಸೂಚನೆ ಕೊಟ್ರು. ಆದ್ರೆ ನಮ್ಮ ಕಾರ್ಯಕರ್ತರು, ತಂದೆಯ ನಿರ್ಧಾರ ಒಂದೇ ಅನ್ನುವ ಮೂಲಕ ನಿರ್ಧಾರವನ್ನ ಗೊಂದಲದಲ್ಲಿ ಇಟ್ಟಿದ್ರು. ಆದ್ರೆ ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆಯದಿರಲು ನಿರ್ಧರಿಸಿರುವ ಹಿನ್ನೆಲೆ ಸೌಮ್ಯ ಇಂದು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗ್ತಿದೆ.

https://www.youtube.com/watch?v=tJ4jyK8b-0A
- Advertisement -

Latest Posts

Don't Miss