ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟಿವ್ ಆಗಿಲ್ಲ. ಸ್ನೇಹಿತರ ಬಳಗ, ಹಬ್ಬ-ಹರಿದಿನಗಳು, ಗಣ್ಯರ ಹುಟ್ದಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಷ್ ಮಾಡ್ತಾರೆ ಅಷ್ಟೇ. ಬಟ್ ದಚ್ಚು ಫ್ಯಾನ್ಸ್ ಫೇಜ್ ಗಳಿಗೆ ಲೆಕ್ಕವಿಲ್ಲ. ಈ ಫ್ಯಾನ್ಸ್ ಬಳಗದಲ್ಲಿರುವ ಅಫಿಷಿಯಲ್ ಅಕೌಂಟ್ ಗಳಲ್ಲಿ ಒಂದಾದ ಡಿ-ಕಂಪನಿ ದಚ್ಚು ಭಕ್ತಗಣಕ್ಕೆ ಎಕ್ಸೈಟ್ ನ್ಯೂಸ್ ವೊಂದನ್ನು ಶೇರ್ ಮಾಡಿದೆ.
ಜನವರಿ 10ಕ್ಕೆ ದಚ್ಚು ಬರ್ತಾರೆ ಎಫ್ ಬಿ ಲೈವ್..!
ದರ್ಶನ್ ಅಭಿಮಾನಿ ಸಂಘ ಡಿ-ಕಂಪನಿ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ವೊಂದನ್ನ ಹಾಕಿದೆ. ಎಲ್ಲಾ ಕನ್ನಡಾಭಿಮಾನಿಗಳಿಗೆ ಒಂದು ವಿಶೇಷ ಪ್ರಕಟಣೆ : ನಮ್ಮೆಲರ ನಲ್ಮೆಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಇದೇ ಜನವರಿ 10 ಬೆಳಗ್ಗೆ 11 ಗಂಟೆಗೆ ತಮ್ಮ FaceBook Page ಅಲ್ಲಿ ನಿಮ್ಮ ಮುಂದೆ ಲೈವ್ ಬರಲಿದ್ದಾರೆ ಎಂದು ಪೋಸ್ಟ್ ಹಾಕಿದೆ.
ಅಷ್ಟಕ್ಕೂ ದರ್ಶನ್ ಫೇಸ್ ಬುಕ್ ಲೈವ್ ಬರ್ತಿರೋದಕ್ಕೆ ಕಾರಣವೇನು..? ಹೊಸ ಸಿನಿಮಾ ಬಗ್ಗೆ ಏನಾದ್ರೂ ಅಪ್ ಡೇಟ್ ಕೊಡ್ತಾರೆ..? ಅಥವಾ ರಾಬರ್ಟ್ ಸಿನಿಮಾದ ರಿಲೀಸ್ ಡೇಟ್ ಏನಾದ್ರೂ ಅನೌನ್ಸ್ ಮಾಡ್ತಾರಾ..? ಅನ್ನೋ ಪ್ರಶ್ನೆಗಳು ದಚ್ಚು ಅಭಿಮಾನಿಗಳಲ್ಲಿ ಓಡಾಡ್ತಿದೆ. ಅದಕ್ಕೆಲ್ಲ ಉತ್ತರ ಸಿಗಬೇಕು ಅಂದ್ರೆ ಜನವರಿ 10ನೇ ತಾರೀಖಿನವರೆಗೆ ಕಾಯಲೇಬೇಕು.
ಈ ಹಿಂದೆ ಒಮ್ಮೆ ಫೇಸ್ ಬುಕ್ ಲೈವ್ ಬಂದಾಗ ದರ್ಶನ್ ತಮ್ಮ ಇಷ್ಟದ ಸೆಲೆಬ್ರಿಟಿ ಯಾರು ಅನ್ನೋದನ್ನು ಹೇಳಿದ್ದರು. ಅಭಿಮಾನಿಗಳೇ ನಿಜವಾದ ಸೆಲೆಬ್ರಿಟಿಗಳು ಎಂದು ಹೇಳಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು.