ಕ್ರಿಸ್ಮಸ್ ಗೆ ರಾಜ್ಯಾದ್ಯಂತ ವಿಶೇಷ ಬಸ್ ಸಂಚಾರ

ಕ್ರಿಸ್ಮಸ್ ಹಬ್ಬದ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್ ನೀಡಿದೆ. ಡಿಸೆಂಬರ್ 19, 20 ಮತ್ತು 24ರಂದು ಬೆಂಗಳೂರಿನಿಂದ ರಾಜ್ಯದಾದ್ಯಂತ ಹೆಚ್ಚುವರಿ ಬಸ್ ಸೇವೆ ಸಂಚರಿಸಲಿದ್ದು, ನಗರದಿಂದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಹಬ್ಬದ ನಂತರ ಡಿಸೆಂಬರ್ 26 ಹಾಗೂ 28ರಂದು ವಾಪಸ್ ಬರುವ ಪ್ರಯಾಣಿಕರಿಗೂ ವಿಶೇಷ ಬಸ್ ಸೇವೆ ಲಭ್ಯವಿದ್ದು, ಎಲ್ಲಾ ಮಾದರಿಯ ಬಸ್ಗಳು ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣನಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಬಸ್‌ಗಳು ವಿಶೇಷ ಕಾರ್ಯಾಚರಣೆ ನಡೆಸಲಿವೆ.

ಮೈಸೂರಿನ ರಸ್ತೆ ಬಸ್ ನಿಲ್ದಾಣ ನಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಬಸ್‌ಗಳು ಪ್ರಯಾಣಿಕರಿಗೆ ಲಭ್ಯವಿದ್ದು, ಸಾಮಾನ್ಯ ಸಾರಿಗೆ, ಐರಾವತ ಹಾಗೂ ಸ್ಲೀಪರ್ ಕೋಚ್ ಸೇವೆಗಳನ್ನು ಎಲ್ಲ ಆವೃತ್ತಿಗಳಲ್ಲಿಯೂ ನೀಡಲಾಗುತ್ತಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ, ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ 5% ರಿಯಾಯಿತಿ, ಹೋಗುವ ಮತ್ತು ಬರುವ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದರೆ 10% ರಿಯಾಯಿತಿ ನೀಡಲಾಗಲಿದೆ ಎಂದು KSRTC ಪ್ರಕಟಣೆ ಸೂಚಿಸಿದೆ.

About The Author