BREAKING NEWS: ಮೇ.31ಕ್ಕೆ ಡಿಕೆ ಶಿವಕುಮಾರ್ ವಿರುದ್ಧದ ಇಡಿ ವಿಶೇಷ ಕೋರ್ಟ್ ವಿಚಾರಣೆ ಮುಂದೂಡಿಕೆ

ನವದೆಹಲಿ:ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಇಡಿ ಅಧಿಕಾರಿಗಳು ಸಲ್ಲಿಸಿದ್ದಂತ ಚಾರ್ಜ್ ಶೀಟ್ ಸಂಬಂಧದ ವಿಚಾರಣೆಯನ್ನು ಇಂದು ಇಡಿ ವಿಶೇಷ ಕೋರ್ಟ್ ನಲ್ಲಿ ನಡೆಯಿತು. ಕೆಲ ವಿಚಾರಣೆಯ ಬಳಿಕ, ಪ್ರಕರಣದ ವಿಚಾರಣೆಯನ್ನು ಮೇ.31ಕ್ಕೆ ಕೋರ್ಟ್ ಮುಂದೂಡಿಕೆ ಮಾಡಿದೆ.

ಕಳೆದ ಎರಡು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಇಡಿ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಐಪಿಸಿ ಸೆಷನ್ 120 ಬಿ ಅಡಿಯಲ್ಲಿ ದಾಖಲಾಗಿದ್ದಂತ ಪ್ರಕರದ ವಿಚಾರಣೆ ಇಂದು ಆರಂಭಗೊಂಡಿತ್ತು.

ಇಡಿ ವಕೀಲರಿಂದ ಸಚಿನ್ ನಾರಾಯಣ್ ಪ್ರಕರಣ ಕುರಿತಂತೆಯೂ ಇಡಿ ಪರ ವಕೀಲರು, ವಿಶೇಷ ಕೋರ್ಟ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟರು. ಆ ಪ್ರಕರಣದ ಅಡಿಯಲ್ಲಿಯೇ ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಈ ವಾದವನ್ನು ಆಲಿಸಿದಂತ ನ್ಯಾಯಾಲಯವು ವಿಚಾರಣೆಯನ್ನು ಮತ್ತೆ ಮೇ.31ಕ್ಕೆ ಮುಂದೂಡಿಕೆ ಮಾಡಿದೆ.

About The Author