ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡಾನ್ಸಿಂಗ್ ಚಾಂಪಿಯನ್’ ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವಿದೆ. ಇದಷ್ಟೇ ಅಲ್ಲದೆ ಈ ಶೋ ಗೆ ಇಬ್ಬರು ವಿಶೇಷ ಅತಿಥಿಗಳು ಈ ಶೋಗೆ ಆಗಮಿಸಿ, ಇನ್ನಷ್ಟು ಮೆರುಗು ತುಂಬಲಿದ್ದಾರೆ.
‘ಡ್ಯಾನ್ಸಿಂಗ್ ಚಾಂಪಿಯನ್ ಶೋ’ನ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಈ ಶೋ ನ ಜಡ್ಜ್ಗಳಾಗಿ ವಿಜಯ್ ರಾಘವೇಂದ್ರ, ಮೇಘನಾ ರಾಜ್ ಹಾಗೂ ಮಯೂರಿ ಉಪಾಧ್ಯ ರವರಿದ್ದಾರೆ. ಈ ಶೋಗೆ ಮತ್ತಷ್ಟು ಮೆರುಗು ತರಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ ಕೂಡ ಭಾಗವಹಿಸಲಿದ್ದಾರೆ. ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಈಗಾಗಲೆ ಶುರುವಾಗಿದೆ.
‘ಡ್ಯಾನ್ಸಿಂಗ್ ಚಾಂಪಿಯನ್ ಶೋ’ ಗೆ ಕಳೆದ ದಿನಗಳ ಹಿಂದೆಯಷ್ಟೇ ಶಿವರಾಜ್ ಕುಮಾರ್ ರವರು ಕೂಡ ಬಂದಿದ್ದರು. ಆ ಸಮಯದಲ್ಲಿ ಒಂದು ಮಗುವಿಗೆ ‘ಪುನೀತ್’ ಎಂದು ನಾಮಕರಣ ಮಾಡುವ ಮೂಲಕ ಶೋ ಗೆ ಮೆರುಗು ತುಂಬಿದ್ದರು. ಇದಿಗೆ ಇನ್ನಷ್ಟು ಮೆರುಗು ತರಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ ಭಾಗವಹಿಸಲಿದ್ದಾರೆ.
ಅಪ್ಪು ನಿಧನದ ನಂತರ ಅಶ್ವಿನಿ ಅವರು ಮನೆಯಿಂದ ಹೊರಬಂದು ಅಪ್ಪು ಹಾಜರಾಗಬೇಕಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಇದೆ ಮೊದಲ ಬಾರಿಗೆ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ