ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿಕೆ ಕೊಟ್ಟ ಮೇಲೆ SIT ತನಿಖೆ ಚುರುಕಾಗಿದೆ. ಈಗಾಗಲೇ ಹತ್ತಾರು ಪಾಯಿಂಟ್‌ಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಇದೀಗ ರಾಜ್ಯ ಸರ್ಕಾರ BNSS – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ ನೀಡಿರುವ ಅಧಿಕಾರದಡಿಯಲ್ಲಿ ಈ ಎಸ್‌ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿದೆ. ಅಂದರೆ, ಈ ತಂಡ ಈಗ ಕಾನೂನುಬದ್ಧವಾಗಿ FIR ದಾಖಲಿಸಬಹುದು, ಆರೋಪಿಗಳನ್ನು ಬಂಧಿಸಬಹುದು ಮತ್ತು ತನಿಖೆ ನಡೆಸಬಹುದಾಗಿದೆ.
ಎಸ್‌ಐಟಿಯ ಪ್ರಧಾನ ಉದ್ದೇಶ ನಡುವೆ ನಾಪತ್ತೆಯಾಗಿದ್ದ ಮಹಿಳೆಯರು ಹಾಗೂ ಯುವತಿಯರ ಶವಗಳನ್ನು ಧರ್ಮಸ್ಥಳದ ಸುತ್ತಮುತ್ತ ಹೂತಿಟ್ಟಿದ್ದಾರೆ ಎಂಬ ಭೀಕರ ಆರೋಪದ ಪರಿಶೀಲನೆ. ಸಾಮಾಜಿಕ ಕಾರ್ಯಕರ್ತನೊಬ್ಬ ನ್ಯಾಯಾಲಯದಲ್ಲಿ ಅರ್ಜಿ ಹಾಕಿ, ಶವಗಳನ್ನು ಗುಪ್ತವಾಗಿ ಹೂತಿಟ್ಟ ಶಂಕೆ ವ್ಯಕ್ತಪಡಿಸಿದ್ದಾನೆ. ಈ ಆರೋಪಗಳಿಗೆ ತೀವ್ರತೆ ತಂದದ್ದು, ಜುಲೈ 12ರಂದು ತಕ್ಷಣವೇ ಒಂದೊಂದೆಷ್ಟು ಶೋಧ ಕಾರ್ಯಗಳು ಆರಂಭವಾದವು.
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪದಡಿ ಇನಿಖೆಗೆ ರಚನೆಯಾಗಿದ್ದ ಎಸ್‌ಐಟಿಗೆ ಪೊಲೀಸ್ ಠಾಣೆ ಮಾನ್ಯತೆಯನ್ನು ಸರ್ಕಾರ ನೀಡಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಂದರೆ ಬಿಎನ್‌ಎಸ್‌ಎಸ್ ಕಲಂ 2(1)(U) ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಚಲಾಯಿಸಲಾಗಿದೆ. ಸರ್ಕಾರದ ಆದೇಶದಂತೆ 2025 ಜುಲೈ 19ರಂದು ರಚನೆ ಮಾಡಲಾದ ಎಸ್‌ಐಟಿಯನ್ನು ಪೊಲೀಸ್ ಠಾಣೆ ಎಂದು ಅನೌನ್ಸ್ ಮಾಡಲಾಗಿದೆ.
ಎಸ್‌ಐಟಿಗೆ ನೇಮಕ ಮಾಡಲಾದ ಪೊಲೀಸ್ ನಿರೀಕ್ಷಕರ ಸರ್ಜೆಯ ಅಥವಾ ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ಬಿಎನ್‌ಎಸ್‌ಎಸ್ ಅಡಿ ಠಾಣಾ ಅಧಿಕಾರಿ ಎಂದು ಘೋಷಣೆ ಮಾಡಲಾಗಿದೆ. ಎಸ್‌ಐಟಿ BNSS ಅಡಿ ತನಿಖಾ ಕ್ರಮಗಳನ್ನು ಅನುಸರಿಸಿ ರಚಿಸಿರುವವ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡುವಂತಹ ಅಧಿಕಾರವನ್ನು ಸರ್ಕಾರ ನೀಡಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ