www.karnatakatv.net :ಹುಬ್ಬಳ್ಳಿ : ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಂಡುಬರೋದು ಕಾಮನ್. ಆದ್ರೆ ಉತ್ತರ ಕರ್ನಾಟಕದಲ್ಲಿ ಗಣೇಶ ಹಬ್ಬದಂದು ಮನೆಯೊಂದರಲ್ಲಿ ಕೂರಿಸಲಾಗೋ ಕೆಂಪು ಗಣೇಶನನ್ನು ಕಾಣೋದಕ್ಕೆ ಸಾವಿರಾರು ಮಂದಿ ಭಕ್ತರು ಬರ್ತಾರೆ.
ಹೌದು, ಉತ್ತರ ಕರ್ನಾಟಕ ಭಾಗದಲ್ಲಿರೋ ಈತನ ಮಹಿಮೆ ಅಪಾರ, ಏನಾದರೂ ಬೇಡಿಕೊಂಡೊಡನೆಯೇ, ನಿಮ್ಮ ಸಕಲ ಇಷ್ಟಾರ್ಥ ಈಡೇರಿದ ಹಾಗೇ. ಅಷ್ಟೊಂದು ಫೇಮಸ್ ಈ ಕೆಂಪು ಗಣೇಶ. ಮನೆಯಲ್ಲಿ ಪ್ರತಿಷ್ಟಾಪನೆಗೊಳ್ಳುವ ಈ ಗಣೇಶನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಅಂದಹಾಗೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಕುಲಕರ್ಣಿ ಎಂಬುವರ ಮನೆಯಲ್ಲಿ ಕೆಂಪು ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಪದ್ದತಿಯಿದೆ. 1827 ರಲ್ಲಿ ಹಳೇ ಹುಬ್ಬಳ್ಳಿಯ ದತ್ತಾವತಾರಿ ಶ್ರೀ ಕೃಷ್ಣೇಂದ್ರ ಸ್ವಾಮಿಗಳು ಛಬ್ಬಿ ಕುಲಕರ್ಣಿ ಮನೆತನದ ತಮ್ಮಪ್ಪನವರಿಗೆ ಆಶೀರ್ವದಿಸಿ, ಪ್ರತಿಷ್ಠಾಪನೆಗೊಂಡ ಕೆಂಪು ಗಣಪತಿ ಇಂದಿನ ಆರನೇ ತಲೆಮಾರಿನವರೆಗೂ ಅದ್ಧೂರಿಯಾಗಿ ಪೂಜಿಸಲ್ಪಡುತ್ತಿದೆ. ಸದ್ಯ ಛಬ್ಬಿಯಲ್ಲಿ ಒಂಬತ್ತು ಜನ ಕುಲಕರ್ಣಿ ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಮನೆತನದವರು ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆಯನ್ನು ಮಾಡ್ತಾಬರ್ತಿದ್ದಾರೆ.
ಈ ವರ ಸಿದ್ದಿ ವಿನಾಯಕ ಅಂತಾನೇ ಫೇಮಸ್ ಆಗಿರೋ ಈ ಕೆಂಪು ಗಣೇಶ ಭಕ್ತರು ಬೇಡಿದ್ದನ್ನು ಕರುಣಿಸೋ ಕರುಣಾಮಯಿ. ಹೀಗಾಗಿ ಈ ಗಣೇಶನ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಷ್ಟೇ ಅಲ್ಲ ಸೇರಿದಂತೆ ಹೊರ ರಾಜ್ಯಗಳಿಂದ ಸಹ ಪ್ರತಿ ವರ್ಷ ಭಕ್ತರು ಆಗಮಿಸುತ್ತಾರೆ. ಈ ಭಾರಿ ಮಳೆ ಸುರೀತಿದ್ರೂ ಕೂಡ ಅದನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಕೆಂಪು ಗಣೇಶನ ದರ್ಶನವನ್ನು ಪಡೆಯುತ್ತಿದ್ದು. ಅಷ್ಟೇ ಅಲ್ಲ, ಇಲ್ಲಿಂದ ಹರಕಿ ಹೊತ್ತು ಅಡಕಿ ಬೆಟ್ಟವನ್ನು ತೆಗೆದುಕೊಂಡು ಹೋದರೆ ಸಾಕು, ನಮ್ಮೆಲ್ಲಾ ಇಷ್ಟಾರ್ಥ ಈಡೇರುತ್ತೆ ಅನ್ನೋದು ಭಕ್ತರ ಅಚಲ ನಂಬಿಕೆ.
ಹಗಲು ರಾತ್ರಿ ಎನ್ನದೆ ಭಕ್ತರು ನಿರಂತರವಾಗಿ ಗಣೇಶನ ದರ್ಶನ ಪಡೆಯುತ್ತಾರೆ. ಈ ಭಾರಿ ಕರೋನ ದೂರವಾಗಲಿ ಅಂತಾ ಕೆಂಪು ಗಣೇಶನನಲ್ಲಿ ಸಂಕಲ್ಪ ಮಾಡಲಾಗಿದೆ.. ಒಟ್ಟಾರೆ ಮೆನೆಯಲ್ಲಿ ಕೂತು ಲಕ್ಷಾಂತರ ಮಂದಿಗೆ ದರ್ಶನ ಭಾಗ್ಯ ಕೊಡ್ತಾ ಆಶೀರ್ವದಿಸ್ತಿರೋ ಈ ಗಣೇಶ ಬೇರೆಲ್ಲೆಡೆ ಸ್ಥಾಪಿಸಲಾಗೋ ಗಣೇಶನಿಗಿಂತ ವಿಶಿಷ್ಟವಾಗಿದ್ದಾನೆ.
ಕರ್ನಾಟಕ ಟಿವಿ- ಹುಬ್ಬಳ್ಳಿ