Special Story: ಒಂದು ಶಾಲೆ ಅಥವಾ ಕಾಲೇಜು ಅಂದ್ರೆ, ಅಲ್ಲಿ ಬರೀ ಶಿಕ್ಷಣ ಮಾತ್ರ ಇದ್ದರೆ ಸಾಲದು, ಅಲ್ಲಿ ಸಂಸ್ಕಾರವೂ ಹೇಳಿ ಕೊಡಬೇಕು ಅನ್ನೋದು ಎಲ್ಲ ಪೋಷಕರ ಆಶಯ. ಆದರೆ ಹಲವು ಶಿಕ್ಷಣ ಸಂಸ್ಥೆಗಳು ಕೇವಲ, ಶಿಕ್ಷಣವನ್ನು ಹೇಳಿಕೊಡುತ್ತಿದೆ. ಇನ್ನು ಕೆಲವು ಶಾಲಾ- ಕಾಲೇಜುಗಳು ದುಡ್ಡಿಗಾಗಿ ಮಾತ್ರವೇ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಆದರೆ ಎಲ್ಲ ಪೋಷಕರ ಆಸೆಯಂತೆ, ಶಿಕ್ಷಣದ ಜೊತೆ, ಸಂಸ್ಕಾರ ಕೊಡುವ ಕಾಲೇಜು ಕೂಡ ಕರ್ನಾಟಕದಲ್ಲಿದೆ. ಆ ಸಂಸ್ಥೆ ಯಾವುದು..? ಅಲ್ಲಿ ಯಾವ ರೀತಿ ಶಿಕ್ಷಣ, ಸಂಸ್ಕಾರ ಕೊಡಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕೆಂಬ ಹಂಬಲದಿಂದ ಡಾ.ಜಯಪ್ರಕಾಶ್ ಎಂಬುವವರು, ಜೈ ಹಿಂದ್ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಡಾ.ಜಯಪ್ರಕಾಶ್ ಅವರು ಹೇಳುವ ಪ್ರಕಾರ, ಮನುಷ್ಯನಿಗೆ ಶಿಸ್ತು ಮುಖ್ಯ. ಶಿಸ್ತಿದ್ದರೆ, ಮನುಷ್ಯ ಯಶಸ್ಸು ಗಳಿಸಲು ಖಂಡಿತ ಸಾಧ್ಯವಾಗುತ್ತದೆ.
ನನಗೆ ನನ್ನ ತಂದೆಯವರು ಶಿಸ್ತಿನ ಪಾಠ ಮಾಡಿದ್ದಾರೆ. ಅದೇ ಸಂಸ್ಕಾರವನ್ನು ನಾನು ನನ್ನ ಶಿಕ್ಷಣ ಸಂಸ್ಥೆಯಲ್ಲಿ ಹೇಳಿಕೊಡುತ್ತಿದ್ದೇನೆ. ನನ್ನ ತಂದೆ ಆಫೀಸಿನಿಂದ ಬಂದ ಬಳಿಕ, ನನಗೆ ಪಾಠ ಹೇಳಿಕೊಡುತ್ತಿದ್ದರು. ಶಿಸ್ತಿನ ಪಾಠ ಕೂಡ ಅವರೇ ನನಗೆ ಹೇಳಿಕೊಟ್ಟಿದ್ದು. ಅಲ್ಲದೇ, ಅಪ್ಪ ನನಗೆ ಏನೇನು ಹೇಳಿಕೊಡಬೇಕು ಎಂದು ಅಮ್ಮನಿಗೆ ಹೇಳಿ ಹೋಗುತ್ತಿದ್ದರು. ಅಮ್ಮ ಅದೇ ರೀತಿ ನನಗೆ ಪಾಠ ಮಾಡುತ್ತಿದ್ದರು. ಅದೇ ಶಿಸ್ತು ಇಂದು ನಾನು ಶಿಕ್ಷಣ ಸಂಸ್ಥೆ ನಡೆಸಲು ಅನುಕೂಲವಾಗಿದೆ ಎನ್ನುತ್ತಾರೆ ಜಯಪ್ರಕಾಶ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.