ಮೈಸೂರು ಮಹಾರಾಜ ಯದುವೀರ ಒಡೆಯರ್ ಮಾಡಿದ ಟ್ವೀಟ್ ನೋಡಿದ್ರೆ, ಯದುವೀರ್‌ಗೆ ರಾಜಕೀಯಕ್ಕೆ ಬರುವ ಆಫರ್ ಇದ್ದು, ರಾಜಕೀಯಕ್ಕೆ ಧುಮುಕಲು ಸಿದ್ಧರಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ನಾನು ರಾಜಕೀಯಕ್ಕೆ ಬರಬೇಕಾ ಎಂಬ ಪ್ರಶ್ನೆ ಕೇಳಿರುವ ಯದುವೀರ್, ಪೋಲ್ ಕ್ರಿಯೇಟ್ ಮಾಡಿದ್ದಾರೆ. ಇನ್ನು ಇದಕ್ಕೆ ಹಲವು ಕಾಮೆಂಟ್‌ಗಳು ಬಂದಿದ್ದು, ಕೆಲವರು ಬನ್ನಿ ಎಂದರೆ ಹಲವರು ಬೇಡವೆಂದಿದ್ದಾರೆ.

ಮಾಲೂರು ತಾಲೂಕಿನ ಹುಳದೇನಹಳ್ಳಿ ಗ್ರಾಮದಲ್ಲಿ ಇಂದು ನಂದಿನಿ ಪ್ರಾಡ್ಯಕ್ಟ್‌ನ ಅಂಗಡಿ ಪ್ರಾರಂಭಿಸಲಾಯಿತ್ತು. ಮಾಲೂರು ಶಾಸಕರಾದ ಶ್ರೀ ಕೆ.ವೈ ನಂಜೇಗೌಡರು ಉದ್ಘಾಟಿಸಿದ್ರು. ಇನ್ನು ಕೆಎಂಎಫ್‌ನ ತಾಲೂಕು ಹಾಗೂ ಜಿಲ್ಲಾ ಸಂಚಾಲಕರು ಆಗಮಿಸಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಊರಿನ ಹಿರಿಯರಾದ ಚಂದ್ರಶೇಖರ್ ಗೌಡರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಟೇಪ್ ಕತ್ತರಿಸುವ ಮೂಲಕ ನಂದಿನಿ ಅಂಗಡಿಗೆ ಚಾಲನೆ ನೀಡಲಾಯಿತು.
ಗ್ರಾಹಕನಿಂದ ಐಸ್‌ಕ್ರೀಮ್‌ಗಾಗಿ 10 ರೂಪಾಯಿ ಎಕ್ಸ್‌ಟ್ರಾ ತೆಗೆದುಕೊಂಡಿದ್ದ ರೆಸ್ಟೋರೆಂಟ್ ಈಗ ಅದೇ ಗ್ರಾಹಕನಿಗೆ 2 ಲಕ್ಷ ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಭಾಸ್ಕರ್ ಜಾಧವ್ ಎಂಬುವವರು 2014ರಲ್ಲಿ ಶಗುನ್ ವೆಜ್ ರೆಸ್ಟೋರೆಂಟ್‌ನಲ್ಲಿ ಎರಡು ಪ್ಯಾಕೇಟ್ ಐಸ್‌ಕ್ರೀಮ್ ಪರ್ಚೇಸ್ ಮಾಡಿದ್ದರು, ಐಸ್‌ಕ್ರೀಮ್ ರೇಟ್ 165 ರೂಪಾಯಿ ಇದ್ದು ರೆಸ್ಟೋರೆಂಟ್‌ನವರು 170 ರೂಪಾಯಿ ತೆಗೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಭಾಸ್ಕರ್ ಜಾಧವ್, ಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ. ಇದೀಗ ಕೇಸ್ ಗೆದ್ದ ಜಾಧವ್‌ಗೆ ರೆಸ್ಟೋರೆಂಟ್ 2 ಲಕ್ಷ ರೂಪಾಯಿ ದಂಡ ನೀಡಿದೆ.
ಇಂದು ಸುಮಲತಾ ಅಂಬರೀಷ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಪುತ್ರ ಅಭಿಷೇಕ್ ಅಂಬರೀಶ್ ಈ ಸಂಭ್ರಮಕ್ಕೆ ಸಾಥ್ ನೀಡಿದ್ದಾರೆ. ಮನೆಯಲ್ಲಿ ಸಿಂಪಲ್ ಆಗಿ ಕೇಕ್ ತಿನ್ನಿಸಿ, ಅಭಿಷೇಕ್ ಅಮ್ಮನಿಗೆ ವಿಶ್ ಮಾಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಅಪ್ಡೇಟ್ ಮಾಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸುಮಲತಾ ಬರ್ತ್‌ಡೇಗೆ ವಿಶ್ ಮಾಡಿದ್ದು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದರ್ ಇಂಡಿಯಾಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.
ಕ್ರಿಕೇಟಿಗ ವಿರಾಟ್ ಕೊಹ್ಲಿ ಅಪ್ಪನಾದ ಸಂಭ್ರಮದಲ್ಲಿದ್ದು, ತಮ್ಮ ಸಂಭ್ರಮವನ್ನ ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಅನುಷ್ಕಾ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವ ಕೊಹ್ಲಿ, ಈಗ ನಾವು ಮೂವರು, ಜನವರಿ 2021ಕ್ಕೆ ಮಗು ಆಗಮಿಸಲಿದೆ ಎಂದು ಹೇಳಿದ್ದಾರೆ. ಇನ್ನು ವಿರುಷ್ಕಾಗೆ ಅಭಿಮಾನಿ ಬಳಗ ಶುಭಕೋರಿದ್ದು, ಮತ್ತೋರ್ವ ಕ್ರಿಕೇಟ್ ಚಾಂಪಿಯನ್ ಇಂಡಿಯನ್ ಟೀಮ್‌ಗೆ ಸೇರ್ಪಡೆಯಾಗುವುದನ್ನು ನೋಡಲು ನಾವು ಕಾತುರರಾಗಿದ್ದೇವೆ ಎಂದಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




