Friday, October 18, 2024

Latest Posts

ತಿರುಪತಿಯಲ್ಲಿ ಕೂದಲು ದಾನ ಯಾಕೆ..?; ಕೇಶಮುಂಡನಕ್ಕೆ ಪೌರಾಣಿಕ ಹಿನ್ನಲೆಯೇನು?

- Advertisement -

ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ದೇಶದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಮುಡಿ ದಾನವನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಕೇವಲ ಪುರುಷರು ಮಾತ್ರವಲ್ಲ, ಮಹಿಳೆಯರು ಕೂಡ ಮುಡಿ ದಾನ ಮಾಡುವುದು ನಿಮಗೆಲ್ಲಾ ಗೊತ್ತಿರೋ ಸಂಗತಿ. ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ಮುಡಿದಾನವನ್ನು ಯಾಕೆ ಮಾಡುತ್ತಾರೆ..? ತಿರುಪತಿಯಲ್ಲಿ ತಲೆ ಕೂದಲು ದಾನ ಮಾಡುವುದರ ಹಿಂದಿನ ರಹಸ್ಯವೇನು..?

 

ವರ್ಷವಿಡೀ ಭಕ್ತಿರಿಗೆ ಬರಗಾಲವಿಲ್ಲದಂತೆ ಸದಾಕಾಲ ಭಕ್ತರಿಂದ ತುಂಬಿ ತುಳುಕುವ ಪವಿತ್ರ ಸನ್ನಿಧಿ ನಮ್ಮ ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿ. ಈ ಪವಿತ್ರ ಸ್ಥಳವು ವಿವಿಧ ಸಂಸ್ಕೃತಿಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ, ಈ ದೇವಾಲಯದ ವಿಶೇಷ ಮಹತ್ವವೆಂದರೆ ದೇವಾಲಯದಲ್ಲಿ ಪೂಜೆಯ ರೂಪದಲ್ಲಿ ತಲೆ ಕೂದಲನ್ನು ದಾನ ಮಾಡುವುದು ವಾಡಿಕೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಅಥವಾ ಪಾಪಗಳು ಮತ್ತು ಅಹಂಕಾರವನ್ನು ತೊಡೆದುಹಾಕಲು ತಿರುಪತಿ ದೇವಸ್ಥಾನಕ್ಕೆ ತಮ್ಮ ಕೂದಲನ್ನು ದಾನ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಸಾಮಾನ್ಯವಾಗಿ ಇಲ್ಲಿ ಪ್ರತಿದಿನ 20 ಸಾವಿರ ಜನರು ತಮ್ಮ ಕೂದಲನ್ನು ದಾನ ಮಾಡುತ್ತಾರೆ. ಇದಕ್ಕಾಗಿ ಪ್ರತಿದಿನ 500ಕ್ಕೂ ಹೆಚ್ಚು ಕ್ಷೌರಿಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ನಾವಿಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಇಲ್ಲಿ ಮಹಿಳೆಯರು ಕೂಡ ತಮ್ಮ ಕೂದಲನ್ನು ದೊಡ್ಡ ಪ್ರಮಾಣದಲ್ಲಿ ದಾನ ಮಾಡುತ್ತಾರೆ.

ಕೇಶಮುಂಡನ ಹಿಂದಿನ ಪೌರಾಣಿಕ ಹಿನ್ನಲೆ ಏನು..?
ಪ್ರಾಚೀನ ಕಾಲದಲ್ಲಿ ವೆಂಕಟೇಶ್ವರ ಸ್ವಾಮಿಯ ಮೇಲೆ ಇರುವೆಗಳ ಪರ್ವತವು ರೂಪುಗೊಂಡಿತು. ಹಸುವೊಂದು ಇಲ್ಲಿಗೆ ಬಂದು ಹಾಲು ಕೊಡಲು ಇರುವೆ ಬೆಟ್ಟಕ್ಕೆ ಹೋಗುತ್ತಿತ್ತು. ಇದನ್ನು ನೋಡಿದ ಹಸುವಿನ ಮಾಲೀಕರು ತೀವ್ರ ಕೋಪಗೊಂಡು ಹಸುವಿನ ತಲೆಗೆ ಕೊಡಲಿಯಿಂದ ಹೊಡೆಯುತ್ತಾರೆ. ಗೋವಿಗೆ ಹೊಡೆದ ಪೆಟ್ಟು ವೆಂಕಟೇಶ್ವರ ಸ್ವಾಮಿಗೆ ತಗುಲುತ್ತದೆ. ಈ ಹೊಡೆತಕ್ಕೆ ವೆಂಕಟೇಶ್ವರ ಸ್ವಾಮಿಯು ಗಾಯಗೊಳ್ಳುತ್ತಾರೆ ಮತ್ತು ಗಾಯಗೊಂಡ ಸ್ಥಳದಲ್ಲಿ ಅವರ ಕೆಲವು ಕೂದಲುಗಳೂ ಉದುರಿ ಹೋಗುತ್ತದೆ.
ಒಮ್ಮೆ ವೆಂಕಟೇಶ್ವರನು ನೀಲಾದ್ರಿ ಪರ್ವತದ ಮೇಲೆ ಮಲಗಿದ್ದನು. ಆ ಸಮಯದಲ್ಲಿ ನೀಲಾದ್ರಿ ದೇವಿಯು ವೆಂಕಟೇಶ್ವರನನ್ನು ಭೇಟಿ ಮಾಡಲೆಂದು ಆಗಮಿಸುತ್ತಾಳೆ ಮತ್ತು ವೆಂಕಟೇಶ್ವರನ ಸೌಂದರ್ಯವನ್ನು ಮೆಚ್ಚುತ್ತಾಳೆ. ಅದೇ ವೇಳೆ ಅವಳು ಭಗವಂತನ ತಲೆಯಲ್ಲಿ ಗಾಯದ ಕಲೆಯನ್ನು ನೋಡುತ್ತಾಳೆ. ಅವಳು ತನ್ನ ಕೂದಲನ್ನು ಕತ್ತರಿಸಿ ಭಗವಂತನ ತಲೆಯ ಮೇಲೆ ಲೇಪಿಸಿ ಅವನ ಸೌಂದರ್ಯವನ್ನು ಪೂರ್ಣಗೊಳಿಸಿದಳು. ನಂತರ ವೆಂಕಟೇಶ್ವರನು ಆ ಸ್ಥಳದಲ್ಲಿ ಕೂದಲು ಮತ್ತು ನೀಲಾದ್ರಿಯ ತಲೆಯ ಮೇಲೆ ರಕ್ತವನ್ನು ಕಂಡು ಅವಳ ಕೂದಲನ್ನು ಹಿಂದಿರುಗಿಸಿದನು. ಆದರೆ ನೀಲಾದ್ರಿ ತಾನು ಕೊಟ್ಟ ತಲೆ ಕೂದಲನ್ನು ಮತ್ತೆ ಹಿಂದಕ್ಕೆ ತೆಗೆದುಕೊಳ್ಳಲು ನಿರಾಕರಿಸಿದಳು ಮತ್ತು ನಿಮ್ಮ ಭಕ್ತರು ಈ ಸ್ಥಳದಲ್ಲಿ ಕೂದಲನ್ನು ದಾನ ಮಾಡುವುದರಿಂದ ಭವಿಷ್ಯದಲ್ಲಿ ಪಾಪದಿಂದ ಮುಕ್ತಿ ಸಿಗುತ್ತದೆ ಎಂದು ವರವನ್ನು ನೀಡಿದಳು.

ಇದರಿಂದ ಸಂತಸಗೊಂಡ ನಾರಾಯಣನು, ಕೂದಲು ದೇಹದ ಸೌಂದರ್ಯದ ಪ್ರಮುಖ ಭಾಗವಾಗಿದೆ ಮತ್ತು ದೇವಿಯು ತನ್ನ ಕೂದಲನ್ನು ತ್ಯಾಗ ಮಾಡುವುದನ್ನು ನೋಡಿ ನಿಜವಾಗಿಯೂ ಪ್ರಭಾವಿತನಾಗಿದ್ದೇನೆ ಎಂದು ಹೇಳುತ್ತಾನೆ. ಯಾವ ವ್ಯಕ್ತಿ ಈ ಸ್ಥಳಕ್ಕೆ ಬಂದು ತನ್ನ ಕೂದಲನ್ನು ದಾನ ಮಾಡುತ್ತಾರೋ ಅವರ ಆಸೆಗಳೆಲ್ಲವೂ ಶೀಘ್ರದಲ್ಲೇ ಈಡೇರುತ್ತದೆ ಎಂದು ವೆಂಕಟೇಶ್ವರ ಸ್ವಾಮಿಯು ಆಶೀರ್ವಾದವನ್ನು ನೀಡುತ್ತಾರೆ. ಈ ನಂಬಿಕೆಯ ಫಲವಾಗಿ ತಿರುಪತಿ ದೇವಸ್ಥಾನದಲ್ಲಿ ಕೂದಲು ದಾನ ಮಾಡುವ ಸಂಪ್ರದಾಯವಿದೆ.

ಈ ಮುಡಿ ಕೊಡುವ ವಿಚಾರದಲ್ಲಿ ಮತ್ತೊಂದು ಕಥೆ ಕೂಡ ಪ್ರಚಲಿತದಲ್ಲಿದೆ.. ಅದುವೇ ನಿಲಂಬರಿ ಸೌಂದರ್ಯ ಕಳೆದಿದ್ದು… ಚಂದ್ರಗಿರಿ ಎಂಬ ಊರಿನಲ್ಲಿ ನೀಲಾಂಬರಿ ಎನ್ನುವಂತಹ ಹುಡುಗಿ ಇರುತ್ತಾಳೆ. ಆಕೆ ಮಹಾ ಸೌಂದರ್ಯವತಿ ಆಕೆಯನ್ನು ನೋಡಿದ್ರೆ ನೋಡುತ್ತಲೇ ಇರಬೇಕೆನ್ನುವಂಥ ಆಸೆ ಹುಟ್ಟುತ್ತ ಇತ್ತು. ಅಂದವೇ ಅಸೂಯೆ ಪಡುವಂತ ಚೆಲುವೆ ಈಕೆ. ಅವಳ ಅಂದದ ಬಗ್ಗೆ ನೀಲಾಂಬರಿಗೆ ತುಂಬಾ ಅಹಂಕಾರ ವಿತ್ತು. ನನಗಿಂತ ಚೆಲುವೆ ಈ ಪ್ರಪಂಚದಲ್ಲಿ ಯಾರು ಇಲ್ಲ ಎನ್ನುವ ಗರ್ವ ಇಟ್ಟುಕೊಂಡಿದ್ದಳು. ಕೆಟ್ಟ ಜಂಭ ಆಕೆಯಲ್ಲಿ ಮನೆ ಮಾಡಿದ್ದು. ಮಾನವನಿಗೆ ಎಷ್ಟೇ ಅಹಂಕಾರ ಇದ್ದರು ಕ್ಷಣಾರ್ದದಲ್ಲಿ ಹೋಗಲಾಗಿಸುವ ಶಕ್ತಿ ಇರುವುದು ಪ್ರಕೃತಿಯಲ್ಲಿಯೇ, ಎಂತದ್ದೇ ಅಂದವಿದ್ರು ನೀಲಾಂಬರಿಗೆ ಸಂತಾನದ ಭಾಗ್ಯವಿರಲಿಲ್ಲ. ನೀಲಾಂಬರಿ ಹಾಗೂ ಆಕೆಯ ಪತಿಗೆ ಈ ವಿಚಾರದಲ್ಲಿ ಬಹಳ ದುಃಖವಿತ್ತು. ಮಕ್ಕಳಿಲ್ಲದ ಕಾರಣಕ್ಕೆ ಆಕೆ ಜನರಿಂದ ಅವಮಾನವನ್ನು ಅನುಭವಿಸುತ್ತಿದ್ದಳು. ತನ್ನ ಅಹಂಕಾರದಿಂದಲೇ ತನಗೆ ಈ ಶಿಕ್ಷೆಯನ್ನು ದೇವರು ನೀಡುತ್ತಿದ್ದಾನೆ ಎಂದು ನಿಲಾಂಬರಿಗೆ ಮಾನವರಿಕೆಯಾಯಿತು. ನಿಲಂಬರಿಗೆ ವೆಂಕಟೇಶ್ವರ ಸ್ವಾಮಿ ಎಂದರೆ ಅಪಾರವಾದ ಭಕ್ತಿ. ಅದಕ್ಕಾಗಿ ವೆಂಕಟೇಶ್ವರ ಸ್ವಾಮಿಯ ಗುಡಿಗೆ ಹೋಗಿ ಕೈಮುಗಿದು ಬೇಡಿ ನನಗೆ ಮಕ್ಕಳಾಗದಿರಲು ನಾನೇ ಕಾರಣ ಎನ್ನುವುದು ನನಗೆ ಗೊತ್ತು. ಯಾಕೆಂದರೆ ನಾನು ನನ್ನ ಸೌಂದರ್ಯದ ಬಗ್ಗೆ ದುರಂಕಾರ ಪಟ್ಟಿದ್ದೇನೆ . ನನ್ನ ಅಹಂಕಾರವನ್ನು ಹೋಗಲಾಡಿಸು ತಂದೆ ಎಂದು ಬೇಡಿಕೊಳ್ಳುತ್ತಾಳೆ ಇದಕ್ಕಾಗಿ ತನ್ನ ತಲೆಯ ಮುಡಿಯನ್ನು ಸ್ವಾಮಿಗೆ ಹರಕೆಯ ರೂಪದಲ್ಲಿ ಕೊಡಲು ನಿರ್ಧರಿಸುತ್ತಾಳೆ. ತದನಂತರ ಅಲ್ಲಿರುವಂಥ ಪುಷ್ಕರಣಿ ನದಿಯಲ್ಲಿ ಮುಳುಗಿ ಏಳುತ್ತಾಳೆ. ಆಗ ಅವಳ ಮೂಡಿ ಸಂಪೂರ್ಣವಾಗಿ ಪುಷ್ಕರಣಿ ನದಿಯಲ್ಲಿ ಇರುತ್ತದೆ ಅವಳು ತಲೆಯಲ್ಲಿ ಕೂದಲು ಇರುವುದಿಲ್ಲ. ಇದನ್ನು ನೋಡಿದ ನೀಲಾಂಬರಿ ವೆಂಕಟೇಶ್ವರನೇ ತನ್ನ ಮುಡಿಯನ್ನ ತೆಗೆದುಕೊಂಡಿದ್ದಾನೆ ಎಂದು ತಿಳಿಯುತ್ತಾಳೆ ವಿಸ್ಮಯ ಎನ್ನುವಂತೆ ವರ್ಷ ತುಂಬುವುದರ ಒಳಗಡೆ ಆಕೆ ಗರ್ಭಿಣಿಯಾಗಿರುತ್ತಾಳೆ ಆಗಿನಿಂದ ವೆಂಕಟೇಶ್ವರನ ದೇವಸ್ಥಾನದಲ್ಲಿ ಹೆಣ್ಣು ಮಕ್ಕಳು ಮುಡಿಯನ್ನ ಕೊಡಲು ಪ್ರಾರಂಭ ಮಾಡಿದ್ದಾರೆ ಎನ್ನುವಂತಹ ಕಥೆಯೂ ಇದೆ.

ಕುಬೇರನಿಂದ ವೆಂಕಟೇಶ್ವರ ಸಾಲವನ್ನು ಪಡೆದಿದ್ದ
ಹೌದು.. ಇನ್ನೊಂದು ಜನಪ್ರಿಯ ನಂಬಿಕೆ ಪ್ರಕಾರ, ವೆಂಕಟೇಶ್ವರ ಸ್ವಾಮಿಯು ಮದುವೆಗಾಗಿ ಕುಬೇರ ದೇವನ ಬಳಿ ಸಾಲವನ್ನು ಪಡೆದುಕೊಳ್ಳುತ್ತಾರೆ. ಈ ಸಾಲವನ್ನು ತೀರಿಸುವುದಕ್ಕಾಗಿ ತಿರುಪತಿ ತಿಮ್ಮಪ್ಪ ಕಲಿಯುಗದಲ್ಲಿ ನನ್ನ ಭಕ್ತರು ನನಗೆ ಚಿನ್ನ, ಬೆಳ್ಳಿ, ಹಣ ಮತ್ತು ಕೂದಲನ್ನು ಹರಕೆಯ ರೂಪದಲ್ಲಿ, ದಾನದ ರೂಪದಲ್ಲಿ ನೀಡುತ್ತಾರೆ. ಇದರಿಂದ ನಾನು ನಿನ್ನ ಸಾಲವನ್ನು ತೀರಿಸುತ್ತೇನೆಂದು ಭರವಸೆಯನ್ನು ನೀಡುತ್ತಾರೆ. ಹೀಗೆ ನಾವು ತಿರುಪತಿಯಲ್ಲಿ ಮುಡಿ ದಾನ ಮಾಡುವುದರಿಂದ ವೆಂಕಟೇಶ್ವರ ಸ್ವಾಮಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿದಂತಾಗುತ್ತದೆ ಎನ್ನುವ ನಂಬಿಕೆ. ಹಾಗಾಗಿ ತಿರುಪತಿ ದೇವಸ್ಥಾನದಲ್ಲಿ ಕೂದಲು ದಾನ ಮಾಡುವುದು ವಾಡಿಕೆ. ದೇವಸ್ಥಾನದ ಸಮೀಪದಲ್ಲಿರುವ ಕಲ್ಯಾಣ ಕಟ್ಟಾದಲ್ಲಿ ಸಾಮೂಹಿಕವಾಗಿ ಕೂದಲು ದಾನ ಮಾಡಲಾಗುತ್ತದೆ.

ತಿರುಪತಿಗೆ ಭೇಟಿ ನೀಡಿದಾಗ ವೆಂಕಟೇಶ್ವರ ಸ್ವಾಮಿಗೆ ಕೂದಲನ್ನು ದಾನ ಮಾಡುವುದರಿಂದ ಆ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ ಮತ್ತು ಆ ವ್ಯಕ್ತಿಯು ಮೋಕ್ಷದ ಮಾರ್ಗವನ್ನು ಕಂಡುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ಹೀಗಾಗಿಯೇ ತಿರುಪತಿಗೆ ಭೇಟಿ ನೀಡುವ ಸಹಸ್ರಾರು ಭಕ್ತರು ವೆಂಕಟೇಶ್ವರ ಸ್ವಾಮಿಗೆ ತಮ್ಮ ಕೇಶ ಅರ್ಪಿಸುತ್ತಾರೆ. ಇಲ್ಲಿ ಹೆಣ್ಣು ಮಕ್ಕಳು ಕೂಡ ತಮ್ಮ ಕೇಶ ಮುಂಡನ ಮಾಡಿಸಿಕೊಳ್ಳಬಹುದು. ಹೆಣ್ಣು ಮಕ್ಕಳಿಗೆ ಕೇಶ ದನಕ್ಕೆ ಯಾವುದೇ ನಿಬರ್ಂಧವಿಲ್ಲ. ಕೆಲ ಹೆಣ್ಣು ಮಕ್ಕಳು ಪೂರ್ತಿ ಕೇಶ ಮುಂಡನ ಮಾಡಿಸಿಕೊಂಡರೆ ಇನ್ನು ಕೆಲ ಹೆಣ್ಣು ಮಕ್ಕಳು ಕೂದಲಿನ ಒಂದು ಭಾಗವನ್ನು ದಾನ ಮಾಡ್ತಾರೆ.
ತಿರುಪತಿ ದೇಗುಲದಲ್ಲಿ ಕೇಶಮುಂಡನ ಮಾಡಿಸಿದ್ರೆ ಪಾಪಗಳು ದೂರಾಗುತ್ತೆ, ಕಷ್ಟಗಳು ಬಗೆಹರಿಯುತ್ತದೆ ಅನ್ನೋ ಪ್ರತೀತಿ ಇದೆ. ಶತಮಾನಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದೆ. ತನ್ನ ಮೇಲೆ ನಂಬಿಕೆ ಇಟ್ಟಿರೋ ಭಕ್ತಾದಿಗಳ ಆಶೆ, ಬಯಕೆಗಳನ್ನು ಸ್ವಾಮಿ ವೆಂಕಟೇಶ್ವರ ಈಡೇರಿಸಲಿ ಅಂತಾ ನಾವು ಪ್ರಾರ್ಥಿಸುತ್ತೇವೆ.

- Advertisement -

Latest Posts

Don't Miss