Monday, April 14, 2025

Latest Posts

ಮೈಸೂರಿನಲ್ಲಿ ಪೂರ್ಣಗೊಂಡ ‘ಶ್ರೀಕೃಷ್ಣ@ಜಿಮೇಲ್.ಕಾಮ್’ ಚಿತ್ರ

- Advertisement -

www.karnatakatv.net : ಸಂದೇಶ್ ನಾಗರಾಜ್ ಅವರ ನಿರ್ಮಾಣದ ಶ್ರೀಕೃಷ್ಣ@ಜಿಮೇಲ್.ಕಾಮ್ ಚಿತ್ರವು ಪೂರ್ಣಗೊಂಡಿದೆ. ಕಳೆದ ಎಂಟು ದಿನಗಳಿಂದ ಮೇಲು ಕೊಟೆಯ ಸುತ್ತಲೂ ಒಂದು ಹಾಡು ಚಿತ್ರೀಕರಿಸಲಾಗಿತ್ತು,ಇಂದು ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ  ಶೂಟಿಂಗ್ ಪೂರ್ಣಗೋಡಿದೆ .

ಒಟ್ಟು ತೊಂಬತ್ತು ದಿನಗಳ ಕಾಲ ಶೂಟಿಂಗ್ ನಡೆದು ನಾಗಶೇಕರ್ ಅವರ ಕಥೆ, ಚಲಚಿತ್ರಕಥೆ, ಸಂಭಾಷಣೆಯಲ್ಲಿ ನಿರ್ದೇಶಿಸಿರುವ ಈ ಚಿತ್ರದ ನಾಯಕ ನಾಗಿ ಡಾರ್ಲಿಂಗ್ ಕೃಷ್ಣ ಅವರು ನಟಿಸಿದ್ದಾರೆ, ಭಾವನಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡನೇ ನಾಯಕನಾಗಿ ನಿರ್ದೇಶಕ ರೀಷಬ್ ಶೆಟ್ಟಿ ಹಾಗು ಚಂದನ್ ಗೌಡರ್ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದತ್ತಣ್ಣ, ಸಾಧುಕೋಕಿಲ್, ಚಿಕ್ಕಣ್ಣ, ಸಾತ್ವಿಕ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮುಂತಾದ ಸ್ಟಾರ್ ಗಳು ಇದ್ದಾರೆ. ನಾಗಶೇಖರ್ ನಿರ್ದೇಶಿಸಿದ ‘ಅಮರ್ ಮೂವಿ ‘ ಚಿತ್ರವು ಈ ಹಿಂದೆ ಸಂದೇಶ್ ಪ್ರೊಡಕ್ಷನ್ ಮೂಲಕ ಬಿಡುಗಡೆಯಾಗಿದೆ,  ಐದು ಹಾಡುಗಳನ್ನು ಒಳಗೊಂಡ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ನಿರ್ದೇಶಿಸಿದ್ದಾರೆ.

ಕವಿರಾಜ್ ಅವರು ಒಂದು ಹಾಡನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ದೀಪು ಎಸ್ ಕುಮಾರ್ ಸಂಕಲನ ಮತ್ತು ಅರುಣ್ ಸಾಗರ್ ಕಲೆ ನಿರ್ದೇಶಿಸಿದ್ದಾರೆ. ಸತ್ಯ ಹೆಗ್ಡೆ ಅವರು ಛಾಯಾಗ್ರಹಣ ಮಾಡಿದ್ದಾರೆ.

- Advertisement -

Latest Posts

Don't Miss