Dasara News:
ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 30 ರಂದು ನಡೆಯುವ ಕಾರ್ಯಕ್ರಮದ ವಿವರ ಇಂತಿದೆ.ಬೆಳಿಗ್ಗೆ 6.00 ಗಂಟೆಗೆ ಶ್ರೀ ರಂಗಸ್ವಾಮಿ ವೇದಿಕೆ ಹಿಂಭಾಗ ಹಾಲು ಕರೆಯುವ ಸ್ಪರ್ಧೆ, ಬೆಳಿಗ್ಗೆ 7.00 ಗಂಟೆಗೆ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣ ಮತ್ತು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಯೋಗ ದಸರಾ ನಡೆಯಲಿದೆ.
ಬೆಳಿಗ್ಗೆ 9.00 ಗಂಟೆಗೆ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಚೆಸ್, ಬೆಳಿಗ್ಗೆ 9.30 ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ಗುಂಡು ಎಸೆತ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ವಾಲಿಬಾಲ್ ಮತ್ತು ಖೋಖೋ ಸ್ಪರ್ಧೆಗಳು ನಡೆಯಲಿದೆ.
ಬೆಳಿಗ್ಗೆ 9.00 ರಿಂದ 10.00 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ, ಜಾನಪದ ಗೀತೆ, ನಾದಸ್ವರ, ವಾದ್ಯ ಸಂಗೀತ, ಸುಗಮ ಸಂಗೀತ ಜಾನಪದ ಮತ್ತು ತತ್ವಪದ, ಭರತನಾಟ್ಯ, ರಂಗಗೀತೆಗಳು ಹಾಗೂ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ.
ಮಹಿಳಾ ದಸರಾ:
ಬೆಳಿಗ್ಗೆ 10.00 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಮಹಿಳಾ ದಸರಾ ಉದ್ಘಾಟನೆ ನಡೆಯಲಿದ್ದು, ಶಾಸಕರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಉದ್ಘಾಟನೆಯ ನಂತರ ಬೆಳಗೋಳ ಮಹಿಳೆಯರಿಂದ ಲಂಬಾಣಿ ನೃತ್ಯ, ಮಂಡ್ಯ ಗೌರಮ್ಮ ರವರಿಂದ ಮಹಿಳೆ ಮತ್ತು ಮಹಿಳಾ ಕಾನೂನು ಬಗ್ಗೆ ಅರಿವು, ಪಾಲಳ್ಳಿ ಮಹಿಳೆಯರಿಂದ ಜನಪದ ನೃತ್ಯ, ಬೆಳಗೋಳ ಮಹಿಳೆಯರಿಂದ ನೃತ್ಯ, ಕಮಲ ಬಾಯಿ ಕೆ.ವಿ.ಕೆ ರವರಿಂದ ರೈತ ಸಂವಾದ, ಹಸಿರು ಸೈನ್ಯ ಕಲಾತಂಡ ಶ್ರೀನಿವಾಸ ಅಗ್ರಹಾರ ರವರಿಂದ ಕಂಸಾಳೆ ನೃತ್ಯ, ಮಹದೇವಪುರ ಮಹಿಳೆಯರಿಂದ ನವದುರ್ಗೆಯರ ನೃತ್ಯ, ಕಿರಂಗೂರಿನ ಕನ್ಯಾಕುಮಾರಿ ವಿ.ಎನ್ ರವರಿಂದ ಭರತನಾಟ್ಯ, ಮೈಸೂರು ಗೋಕುಲಂ ಶ್ರೇಯಾ.ಆರ್ ರವರಿಂದ ಶ್ರೀ ಕೃಷ್ಣ ಲೀಲಾ ಭರತನಾಟ್ಯ, ಪಾಂಡವಪುರ ಕೆ ಬೆಟ್ಟಹಳ್ಳಿ ಇಂದುಶ್ರೀ.ಎನ್ ರವರಿಂದ ಭರತನಾಟ್ಯ, ಪಾಂಡವಪುರ ಸುಭಾಷ್‍ನಗರ ಕಲಾನಿಧಿ ನೃತ್ಯ ಶಾಲೆಯವರಿಂದ ಸಾಮೂಹಿಕ ಭರತನಾಟ್ಯ, ಬೆಂಗಳೂರು ಸಹನಾ ಎಸ್.ಎಲ್ ರವರಿಂದ ಭರತನಾಟ್ಯ, ಮಂಡ್ಯ ಸೌಮ್ಯ ಎಚ್ ಪಿ ಸುಗಮ ಸಂಗೀತ ಮತ್ತು ಜಾನಪದ ಗೀತೆ, ಪಾಂಡವಪುರ ಶಮಿತಾ ಡಿ.ಎನ್ ರವರಿಂದ ಏಕವ್ಯಕ್ತಿ ಭರತನಾಟ್ಯ, ಮಾರಗೌಡನಹಳ್ಳಿ ಕಾವೇರಿ ಮಹಿಳಾ ಸಾಂಸ್ಕøತ ಕಲಾ ಸಂಘ ರವರಿಂದ ನಾಟಕ ಕಾರ್ಯಕ್ರಮಗಳು ನಡೆಯಲಿದೆ.
ಮಧ್ಯಾಹ್ನ 3.00 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ನೃತ್ಯ, ಜಾನಪದ ಹಾಗೂ ಸುಗಮ ಸಂಗೀತ, ಕರೋನ ಜಾಗೃತಿ ಮೂಡಿಸುವ, ಪರಿಸರ ಮತ್ತು ವನ್ಯಮೃಗಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ನಾಟಕ, ದಾಸರ ಪದಗಳು, ದೇವರ ನಾಮ ಮತ್ತು ಭಕ್ತಿಗೀತೆಗಳು, ಯಕ್ಷಗಾನ, ಸುಗಮ ಸಂಗೀತ, ಜಾನಪದ, ತತ್ವಪದÀ ಜಾನಪದ ಸುಗ್ಗಿ ನೃತ್ಯ, ಗಾನಸಿರಿ ಸುಗಮ ಸಂಗೀತ, ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ ಹಾಗೂ ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿವೆ.
ಯುವ ದಸರಾ:
ಸಂಜೆ 5.00 ಗಂಟೆಯಿಂದ ಶ್ರೀರಂಗ ವೇದಿಕೆಯಲ್ಲಿ ಮಂಡ್ಯ ಎ.ಇ.ಟಿ ನರ್ಸಿಂಗ್ ಕಾಲೇಜು ವತಿಯಿಂದ ಡ್ಯಾನ್ಸ್ ಮತ್ತು ಸಾಂಗ್-1, ಎಸ್.ಡಿ ಜಯರಾಂ ನರ್ಸಿಂಗ್ ಕಾಲೇಜು ವತಿಯಿಂದ ಪ್ರಜಾ ಕುಣಿತ ಮತ್ತು ವೀರಗಾಸೆ, ಭರತ ನಾಟ್ಯ ಮತ್ತು ಜಾನಪದ ನೃತ್ಯ, ಮಂಡ್ಯ ಸ್ಯಾಂಜೋ ನರ್ಸಿಂಗ್ ಕಾಲೇಜು ವತಿಯಿಂದ ಶಾಸ್ತ್ರೀಯ ನೃತ್ಯ, ಪಾಶ್ಚಾತ್ಯ ನೃತ್ಯ, ಮಳವಳ್ಳಿ ಮೈಸೂರು ರಸ್ತೆ ವಿದ್ಯಾಪ್ಯಾರಾ ಮೆಡಿಕಲ್ ವಿಜ್ಞಾನ ಸಂಸ್ಥೆಯ ವತಿಯಿಂದ, ಕೋಲಾಟ, ಕೇರಳ ಸಾಂಸ್ಕøತಿಕ ನೃತ್ಯ ಮತ್ತು ಜಾರ್ಖಂಡ್ ಸಾಂಸ್ಕøತಿಕ ನೃತ್ಯ, ಸಮೂಹ ನೃತ್ಯ ನಡೆಯಲಿದೆ.
ರಾತ್ರಿ 7.00 ಗಂಟೆಗೆ ಸ್ನಾನಘಟ್ಟದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಂದ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.00 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಆಶಿಕಾ ರಂಗನಾಥ್, ಸಾನ್ವಿ ಶ್ರೀವಾತ್ಸವ್, ಸಿಂಧೂ ಲೋಕನಾಥ್, ಭಾವನಾ ರಾವ್, ಶರಣ್ಯ ಶೆಟ್ಟಿ ಹಾಗೂ ಇತರರಿಂದ ಸ್ಟಾರ್ ನೈಟ್ಸ್ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
“ಪಾರಂಪರಿಕ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್