ಬೆಂಗಳೂರು: ಸಾಕಷ್ಟು ವಿರೋಧದ ನಡುವೆ ಇಂಗ್ಲೀಷ್ ಶಾಲೆ ಆರಂಭಿಸಲು ಚಿಂತಿಸಿದ್ದ ಸರ್ಕಾರ ಇದೀಗ ಈ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಈಗಾಗಲೇ ಶಾಲೆಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು ಮೇ 13ರೊಳಗೆ ಪಟ್ಟಿ ಪ್ರಕಟವಾಗೋ ಸಾಧ್ಯತೆಯಿದೆ. ಇನ್ನು ಒಂದು ಸಾವಿರ ಸರ್ಕಾರಿ ಇಂಗ್ಲೀಷ್ ಶಾಲೆಗಳನ್ನು ತೆರೆಯೋ ಉದ್ದೇಶ ಹೊಂದಿದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 2 ಶಾಲೆಗಳನ್ನ ಆಯ್ಕೆ ಮಾಡಿಕೊಳ್ಳೋ ಪ್ರಕ್ರಿಯೆಯನ್ನ ಶಿಕ್ಷಣ ಇಲಾಖೆ ಈಗಾಗಲೇ ಶುರುಮಾಡಿದೆ. ಪ್ರತಿ ಶಾಲೆಗೆ 30 ಮಕ್ಕಳನ್ನ ಆಯ್ಕೆ ಮಾಡಿಕೊಂಡು ಇಂಗ್ಲೀಷ್ ಮತ್ತು ಕನ್ನಡ ಪಠ್ಯ ನೀಡಲಾಗುತ್ತದೆ. 2019-2020 ಶೈಕ್ಷಣಿಕ ವರ್ಷದಿಂದಲೇ ತರಗತಿಗಳು ಆರಂಭವಾಲಿವೆ. ಈ ಶಾಲೆಗಳಲ್ಲಿ ಬೋಧಿಸೋ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಿಂದ ಟ್ರೇನಿಂಗ್ ನೀಡಲಾಗುತ್ತೆ.
ಆದ್ರೆ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಮಾಜಿ ಸಿಎಂ ಮತ್ತು ಮೈತ್ರಿ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರೋ ಸಿದ್ದರಾಮಯ್ಯ ಮತ್ತು ನಾನಾ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೆಲ್ಲದರ ನಡುವೆಯೂ ಸರ್ಕಾರದ ಈ ದಿಟ್ಟ ಹೆಜ್ಜೆಗೆ ಪೋಷಕ ವಲಯದಲ್ಲಿ ಪ್ರಶಂಗೆ ಪಾತ್ರವಾಗಿದೆ.