Friday, June 2, 2023

Latest Posts

ನಿನ್ನೆ ಸೇಲ್ ಆದ ಚಿನ್ನ ಎಷ್ಟು ಗೊತ್ತಾ?- ಚಿನ್ನದ ವ್ಯಾಪಾರಿಗಳು ಫುಲ್ ಖುಷ್

- Advertisement -

ಬೆಂಗಳೂರು: ಅಕ್ಷಯ ತೃತೀಯ ಅಂಗವಾಗಿ ಮಂಗಳವಾರ ರಾಜ್ಯಾದ್ಯಂತ ಒಟ್ಟು 1,480 ಕೆ.ಜಿ.ಗೂ ಹೆಚ್ಚು ಚಿನ್ನ, 1,500 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದೆ. ಈ ಮೂಲಕ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸುಮಾರು 3,900 ಕೋಟಿಗಿಂತ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅತಿ ಹೆಚ್ಚು ವಹಿವಾಟು ನಡೆದಿದೆ. ಕಳೆದ ಬಾರಿಗಿಂತ ಶೇ.30ರಷ್ಟುಹೆಚ್ಚು ವಹಿವಾಟು ನಡೆಯುತ್ತೆ ಅಂತ ಚಿನ್ನದ ವ್ಯಾಪಾರಿಗಳು ನಿರೀಕ್ಷಿಸಿದ್ರು. ಆದ್ರೆ ಅದರ ಎರಡರಷ್ಟು ಮಾರಾಟವಾಗಿದ್ದು ವ್ಯಾಪಾರಿಗಳಲ್ಲಿ ಸಂತಸ ತಂದಿದೆ. ಬೆಂಗಳೂರಿನ ಆಭರಣ ಮಳಿಗೆಗಳಲ್ಲೇ ಸುಮಾರು 560 ಕೆ.ಜಿ. ಚಿನ್ನ, 300 ಕೆ.ಜಿ.ಗೂ ಹೆಚ್ಚು ಬೆಳ್ಳಿ ಖರೀದಿಯಾಗಿದೆ.

 ಆಭರಣ ಚಿನ್ನ (22 ಕ್ಯಾರೆಟ್‌) ಒಂದು ಗ್ರಾಂಗೆ 2,960 ರೂಪಾಯಿ ಹಾಗೂ ಬೆಳ್ಳಿ ಪ್ರತಿ ಗ್ರಾಂ 38 ರೂಪಾಯಿಗೆ ಮಾರಟವಾಗಿದೆ. ಕಳೆದ 15-20 ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗಿರೋದೂ ಕೂಡ ಅಕ್ಷಯ ತೃತೀಯ ದಿನ ಚಿನ್ನ ಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ ಅಂತ ಹೇಳಲಾಗುತ್ತಿದೆ. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಹಲವು ರಿಯಾಯಿತಿ, ಕೊಡುಗೆಗಳನ್ನು ಘೋಷಿಸಲಾಗಿತ್ತು. ಮೇ 8ರ ಬುಧವಾರ ಮುಂಜಾನೆ 3 ಗಂಟೆ 5 ನಿಮಿಷಕ್ಕೆ ರೋಹಿಣಿ ನಕ್ಷತ್ರ ಪ್ರವೇಶವಾದ ನಂತರ ತದಿಗೆ ಮುಕ್ತಾಯಗೊಂಡಿತು. ಮಂಗಳವಾರ ರಾತ್ರಿ 11ರವರೆಗೂ ಕೆಲವೆಡೆ ಖರೀದಿಯಾಗಿದೆ.

- Advertisement -

Latest Posts

Don't Miss