Monday, September 25, 2023

Latest Posts

ನೀವು ಮತ್ತೆ ಸಿಎಂ ಆಗ್ಬೇಕು- ಸಿದ್ದು ‘ಪರ’ ಬ್ಯಾಟಿಂಗ್

- Advertisement -

ಬಳ್ಳಾರಿ: ಮೈತ್ರಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿ ಒಂದು ವರ್ಷವಾದ್ರೂ ಸಿದ್ದರಾಮಯ್ಯ ಮೇಲಿನ ಕ್ರೇಜ್ ಮಾತ್ರ ಅವರ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ಇದಕ್ಕೆ ಕಾಂಗ್ರೆಸ್ ನ ಮುಖಂಡರೂ ಹೊರತಾಗಿಲ್ಲ. ಇಂದು ಬಳ್ಳಾರಿಯ ಶ್ರೀ ಕ್ಷೇತ್ರ ಮೈಲಾರದ ಏಳುಕೋಟಿ ಭಕ್ತ ಕುಟೀರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮತ್ತೆ ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನ್ನೋ ಕೂಗು ಕೇಳಿಬಂತು. ಕಾರ್ಯಕ್ರಮದಲ್ಲಿ ಮಾತನಾಡ್ತಿದ್ದ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅಂತ ಡಯಾಜ್ ತಟ್ಟಿ ಘಂಟಾಘೋಷವಾಗಿ ಹೇಳಿದ್ರು.ಸಿದ್ದರಾಮಯ್ಯ ಆಡಳಿತದಲ್ಲಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಿದೆ. ಜನರೂ ಮತ್ತೆ ಅವರೇ ಸಿಎಂ ಆಗ್ಬೇಕು ಅಂತ ಹೇಳ್ತಿದ್ರು.

ಬಳಿಕ ಮಾತನಾಡಲು ಹೊರಟ ಸಿದ್ದರಾಮಯ್ಯರನ್ನು ನೋಡಿದ ಜನ ಮತ್ತೆ ನೀವೇ ಮುಖ್ಯಮಂತ್ರಿ ಆಗಬೇಕು ಅಂತ ಕೂಗಿದ್ರು.ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದು, ಜನರ ಆಶೀರ್ವಾದ ಇದ್ರೆ ಮತ್ತೆ ಸಿಎಂ ಆಗ್ತೀನಿ, ಖುರ್ಚಿ ಕೊಡೋವ್ರೂ ನೀವೇ, ಕೆಳಗಿಳಿಸೋವ್ರೂ ನೀವೇ ಅಂತ ಹೇಳಿದ್ರು.

- Advertisement -

Latest Posts

Don't Miss