Sunday, October 13, 2024

Latest Posts

‘ಪ್ರಧಾನಿ ಮೋದಿ ದುರ್ಯೋಧನನಂತೆ’- ಪ್ರಿಯಾಂಕಾ ಗಾಂಧಿ ಟೀಕೆ

- Advertisement -

ಹರಿಯಾಣ:ಲೋಕಸಭೆ ಚುನಾವಣೆಗೆ ಇನ್ನೇನು ತೆರೆ ಬೀಳಲಿದೆ. ಆದ್ರೆ ಈ ಮಧ್ಯೆ ರಾಜಕೀಯ ನಾಯಕರು ತಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ತಿದ್ದಾರೆ. ಹರಿಯಾಣದ ಅಂಬಾಲಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನ ದುರ್ಯೋಧನನಿಗೆ ಹೋಲಿಸಿದ್ದಾರೆ. ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳೋ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ಅಹಂಕಾರದಿಂದ ನಡೆದುಕೊಂಡ ದುರ್ಯೋಧನ. ಆತ ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ, ಹೀಗಾಗಿ ನಾಶವಾಗಿ ಹೋದ. ಹೀಗೆ ಮೋದಿ ಅಹಂಕಾರವನ್ನ ಅಡಗಿಸೋ ಕಾಲ ಹತ್ತಿರವಾಗ್ತಾ ಇದೆ ಅಂತ ಪ್ರಿಯಾಂಕ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ  ಇದೇ ರೀತಿ ಪ್ರಧಾನಿ ಮೋದಿ , ನಿಮ್ಮ ತಂದೆ ನಂಬರ್ 1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು ಅಂತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತಾಗಿ ರಾಹುಲ್ ಗಾಂಧಿಯವರನ್ನ ಟೀಕೆ ಮಾಡಿದ್ದರು.

- Advertisement -

Latest Posts

Don't Miss