Saturday, May 25, 2024

Latest Posts

ಐಸಿಸಿ ಟಿ20 ವಿಶ್ವಕಪ್ ಟೂರ್ನಿ: ಅಭಿಮಾನಿಗಳಿಗೆ ಸ್ಟ್ಯಾಡಿಂಗ್ ರೂಮ್ ಟಿಕೆಟ್

- Advertisement -

ದುಬೈ: ಮುಂಬರುವ ಟಿ20 ವಿಶ್ವಕಪ್‍ನಲ್ಲಿ ಭಾರತ ಮತ್ತು ಪಾಕಿಸ್ಥಾನ ಕಾದಾಟ ವೀಕ್ಷಿಸಲು ಐಸಿಸಿ ಸ್ಟ್ಯಾಡಿಂಗ್ ರೂಮ್ ಟಿಕೆಟ್‍ಗಳನ್ನು ಬಿಡುಗಡೆ ಮಾಡಿದೆ.

ಅ.23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಲೋಕದ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಐಸಿಸಿ ಸ್ಟ್ಯಾಡಿಂಗ್ ರೂಮ್ ಟಿಕೆಟ್‍ಗಳನ್ನು ಕ್ರಿಕೆಟ್ ಅಭಿಮಾನಿಗಳಿಗೆ ನೀಡಿದೆ.
ಕಳೆದ ಫೆಬ್ರವರಿಯಲ್ಲಿ ಕೇವಲ ಐದು ನಿಮಿಷಗಳಲ್ಲಿ ಟಿಕೆಟ್‍ಗಳು ಮಾರಾಟವಾಗಿದ್ದವು.

ಇದೀಗ 4 ಸಾವಿರ ಸ್ಟ್ಯಾಡಿಂಗ್ ರೂಮ್ ಟಿಕೆಟ್‍ಗಳು 30 ಆಸ್ಟ್ರೇಲಿಯಾ ಡಾಲರ್‍ನಲ್ಲಿ ಸಿಗುತ್ತವೆ. ಮೊದಲ ಬಾರಿಗೆ ಈ ರೀತಿ ಟಿಕೆಟ್‍ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಐಸಿಸಿ ಹೇಳಿದೆ.

- Advertisement -

Latest Posts

Don't Miss