ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾನೆ. ಜೀವ ಭದ್ರತೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಸಂತ ಗಿಳಿಯಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ದೂರು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅವರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಸಂತ ಗಿಳಿಯಾರ್ ಧರ್ಮಸ್ಥಳವನ್ನು ಹಂದಿ ಹೊಡೆದಂತೆ ಹೊಡೆಯಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಹಿಂದು ಧರ್ಮ ಹಾಗೂ ದೇವಸ್ಥಾನಗಳ ವಿರುದ್ಧ ತಿರುವು ಪಡೆದುಕೊಂಡ ಹಿಂಸಾತ್ಮಕ ಭಾಷಣಗಳನ್ನು ನೀಡಿದ್ದಾನೆ. ಜಾಲತಾಣಗಳು, ಮಾಧ್ಯಮಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ನನ್ನ ವಿರುದ್ಧ ಸುಳ್ಳು ಸುದ್ದಿ ಹರಿ ಬಿಟ್ಟಿದ್ದಾನೆ. ಜನರನ್ನು ಕೆಣಕುವ ಕೆಲಸ ನಡೆದಿದೆ ಎಂದು ಸ್ಟ್ಯಾನ್ಲಿ ದೂರಿದ್ದಾರೆ.
ಈ ಕುರಿತು BNS 2023ರ ಸೆಕ್ಷನ್ 196(1)(A) ಮತ್ತು 353(2) ಅಡಿಯಲ್ಲಿ ವಸಂತ ಗಿಳಿಯಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಸಂತ ಗಿಳಿಯಾರ್‌ಗೆ ಪಾಠ ಕಲಿಸಲು ನಾನು ಈ ದೂರು ನೀಡಿದ್ದಾರೆ. ಅವನು ಪದೇಪದೇ ಸುಳ್ಳು ಹೇಳಿಕೆ ನೀಡುತ್ತಾನೆ. ಧಾರ್ಮಿಕ ಸಂಘರ್ಷ ಹುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾನೆ.
ನನ್ನ ವಿರುದ್ಧ ವೈಯಕ್ತಿಕ ದ್ವೇಷದಿಂದ ಅಭಿಪ್ರಾಯಗಳನ್ನು ತಿರುವುಮಾಡಿ, ಘನತೆಗೆ ಧಕ್ಕೆ ತರುತ್ತಿದ್ದಾನೆ. ನಾನು ಎರಡು ಬಾರಿ ಲೀಗಲ್ ನೋಟಿಸ್ ಕಳುಹಿಸಿದ್ದರೂ ಪ್ರತಿಕ್ರಿಯೆ ಇಲ್ಲ. ಕೊನೆಗೂ ಕಾನೂನಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸುವ ನಿರ್ಧಾರ ತೆಗೆದುಕೊಂಡೆ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

