ರಂಜನೆಗೆ ಮತ್ತೊಂದು ಹೆಸರು ರಿಯಾಲಿಟಿ ಶೋಗಳ ತವರು. ಕರ್ನಾಟಕದ ಮನೆ ಮನೆಯಲ್ಲೂ ಪ್ರತಿನಿತ್ಯ ಎಲ್ಲಾ ವರ್ಗದವರು ಮೆಚ್ಚಿ ನೋಡೋ ಚಾನೆಲ್ ಸ್ಟಾರ್ ಸುವರ್ಣ. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ರಿಯಾಲಿಟಿ ಶೋಗಳ ಅಸಲಿಯತ್ತನ್ನು ಪರಿಚಯಿಸಿದೆ. ತನ್ನದೇ ಆದ ಶೈಲಿಯಲ್ಲಿ ಭಿನ್ನ ವಿಭಿನ್ನ ಕಾರ್ಯಕ್ರಮಗಳನ್ನ ಕೊಟ್ಟು, ಅವ್ರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿರೋ ವಾಹಿನ ಸ್ಟಾರ್ ಸುವರ್ಣ, ಇದೀಗ ಮತ್ತೊಂದು ವಿಶೇಷ ಕಾರ್ಯಕ್ರಮದೊಂದಿಗೆ ಹೊಸ ಸಂಚಲನ ಮೂಡಿಸೋದಕ್ಕೆ ಸಜ್ಜಾಗಿದೆ.
ಅದೇ “Ismart ಜೋಡಿ”, ಪ್ರೀತಿ ಹೊತ್ತು ನಿಮ್ಮ ಹೃದಯ ಕದಿಯೋಕ್ಕೆ ಬರ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಕಿರುತೆರೆಯ ಸೆನ್ಸೇಷನ್ ಬೆಳ್ಳಿ ತೆರೆಯ ಗೋಲ್ಡನ್ ಸ್ಟಾರ್ ಗಣೇಶ್ ಈ “Ismart ಜೋಡಿ” ಯನ್ನ ಹೆಗಲ ಮೇಲೆ ಹೊತ್ತಿದ್ದಾರೆ. ಗಣೇಶ್ ಅವ್ರ ನಿರೂಪಣೆ ಈ ಕಾರ್ಯಕ್ರಮದ ಶಕ್ತಿ. ಗಣೇಶ್ ಈ ಕಾರ್ಯಕ್ರಮದ ಮೂಲಕ ವಿಶಿಷ್ಠವಾಗಿ ಕಾಣಸಿಗಲಿದ್ದು, ವಾರಾಂತ್ಯದಲ್ಲಿ ಗೋಲ್ಡನ್ ಸ್ಟಾರ್ ಕಡೆಯಿಂದ ವಿಶೇಷ ರಂಜನೆ ಸಿಗಲಿದೆ.

ಇಸ್ಮಾರ್ಟ್ ಜೋಡಿಗಾಗಿ ಸಜ್ಜಾಗಿದೆ ರೋಮ್ಯಾಂಟಿಕ್ ವೇದಿಕೆ
“Ismart ಜೋಡಿ” ಕಾರ್ಯಕ್ರಮಕ್ಕಾಗಿ ರಾಕ್ ಲೈನ್ ಸ್ಟುಡಿಯೋದಲ್ಲಿ ಅದ್ಧೂರಿ ವೆಚ್ಚದಲ್ಲಿ ಸೆಟ್ ಹಾಕಿದ್ದು, ಈ ಸೆಟ್ ಕಾರ್ಯಕ್ರಮದ ಹೈಲೈಟ್ ಗಳಲ್ಲಿ ಒಂದಾಗಿದೆ. ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಶೀರ್ಷಿಕೆ ಗೀತೆಯನ್ನು ಆಲ್ ಓಕೆ ಅಲೋಕ್ ಕಂಪೋಸ್ ಮಾಡಿ ಹಾಡಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರೋ ಪ್ರೊಮೋದಲ್ಲಿ ಹಾಡು ಆಗ್ಲೇ ವೀಕ್ಷಕರ ಗಮನ ಸೆಳೆದಿದೆ.
“Ismart ಜೋಡಿ”ಗಳಲ್ಲಿ ತಾರಾ ಜೋಡಿಗಳ ಸಮಾಗಮ
ಜನಪ್ರಿಯ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈಗಾಗ್ಲೇ ಸ್ಟಾರ್ ಸುವರ್ಣ ವಾಹಿನಿ ಅತ್ಯುತ್ತಮ ಜೋಡಿಗಳನ್ನ ಆಯ್ಕೆ ಮಾಡಿಕೊಂಡಿದ್ದು, ಸದ್ಯದಲ್ಲೇ ಜೋಡಿಗಳ ಅನಾವರಮದೊಂದಿಗೆ ಇಸ್ಮಾರ್ಟ್ ಜೋಡಿ ಕಾರ್ಯಕ್ರಮಕ್ಕೆ ಅದ್ದೂರಿ ಜಾಲನೆ ಸಿಗಲಿದೆ.
“Ismart ಜೋಡಿ” ಜುಲೈ.16ಕ್ಕೆ ಗ್ರ್ಯಾಂಡ್ ಲಾಂಚ್
ರೋಮ್ಯಾಂಟಿಕ್ ತಾರಾ ಜೋಡಿಗಳನ್ನು ಕನ್ನಡಿಗರ ಮುಂದೆ ರಮಿಸಿ, ಕುಣಿಸಿ, ನಗಿಸಿ, ಆಡಿಸಿ, ಬೀಳಿಸಿ ಒಟ್ಟಾರೆ ವೀಕೆಂಡ್ ನಲ್ಲಿ ಕನ್ನಡಿಗರಿಗೆ ಭರಪೂರ ಮನರಂಜನೆಯ ಇಸ್ಮಾರ್ಟ್ ಜೋಡಿ ಇದೇ ತಿಂಗಳ 16ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹನಿಯಲ್ಲಿ ಪ್ರಸಾರವಾಗಲಿದೆ.




