ದೇಶದ ಹೆಚ್ಚಿನ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದಿದ್ದರೆ ಅವರ ದಿನ ಪ್ರಾಂಭವಾಗುವುದಿಲ್ಲ. ಇಲ್ಲದಿದ್ದರೆ ತಲೆನೋವು ಶುರುವಾಗುತ್ತದೆ. ಪೌಷ್ಟಿಕತಜ್ಞರು ಚಹಾದ ಬದಲಿಗೆ ಕೆಲವು ಆರೋಗ್ಯಕರ ಆಹಾರಗಳೊಂದಿಗೆ ದಿನವನ್ನು ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ಅದರಲ್ಲಿ ನೆನೆಸಿದ ಬಾದಾಮಿ, ನೆನೆಸಿದ ಒಣದ್ರಾಕ್ಷಿ ಮತ್ತು ಬಾಳೆಹಣ್ಣುಗಳು ಸೇರಿವೆ. ಇವುಗಳನ್ನು ಹೇಗೆ ತೆಗೆದುಕೊಳ್ಳುವುದು ಎಂದು ತಿಳಿಸಿ ಕೊಟ್ಟಿದ್ದಾರೆ ಆ ವಿವರಣೆಗಳನ್ನು ತಿಳಿದುಕೊಳ್ಳೋಣ .
ಬಾಳೆಹಣ್ಣು:
ಜೀರ್ಣಕಾರಿ ಸಮಸ್ಯೆ ಇರುವವರು ಅಥವಾ ಸಕ್ಕರೆಯ ಕೋರಿಕೆಯಿಂದ ಬಳಲುತ್ತಿರುವವರು ಬೆಳಗಿನ ಉಪಾಹಾರಕ್ಕೆ ಮೊದಲು ಬಾಳೆಹಣ್ಣು ತಿನ್ನಬೇಕು. ವಾರಕ್ಕೆ 2 ರಿಂದ 3 ಬಾರಿ ತಿನ್ನಿರಿ. ಇವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತರಬೇಡಿ.
ಒಣದ್ರಾಕ್ಷಿ:
ಪ್ರತಿದಿನ ಕನಿಷ್ಠ 6 ರಿಂದ 7 ನೆನೆಸಿದ ಒಣದ್ರಾಕ್ಷಿಗಳನ್ನು ತಿನ್ನಲು ತಜ್ಞರು ಹೇಳುತ್ತಾರೆ. ಪಿಸಿಓಎಸ್ ಮತ್ತು ಋತುಚಕ್ರದ ಸಮಸ್ಯೆ ಇರುವ ಮಹಿಳೆಯರು ಒಣದ್ರಾಕ್ಷಿಯೊಂದಿಗೆ ಎರಡು ಕೇಸರಿ ಹೂವುಗಳನ್ನು ನೆನೆಸಿ ನೀರನ್ನು ಕುಡಿಯಬೇಕು.
ಬಾದಾಮಿ:
ಇನ್ಸುಲಿನ್ ಪ್ರತಿರೋಧ, ಮಧುಮೇಹ, ಪಿಸಿಒಡಿ ಅಥವಾ ನಿದ್ರಾಹೀನತೆ ಇರುವವರು ದಿನಕ್ಕೆ ಕನಿಷ್ಠ 4 ರಿಂದ 5 ನೆನೆಸಿದ ಬಾದಾಮಿ ತಿನ್ನಬೇಕು. ಉತ್ತಮ ಫಲಿತಾಂಶ ದೊರೆಯಲಿದೆ.
ನೀವು ಚಹಾದ ಚಟವನ್ನು ಹೊಂದಿದ್ದರೆ ಬೆಳಗಿನ ಉಪಾಹಾರಕ್ಕೆ 15 ನಿಮಿಷಗಳ ಮೊದಲು ಇದನ್ನು ತೆಗೆದುಕೊಳ್ಳಿ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಇವುಗಳನ್ನು ತಿಂದ 15 ರಿಂದ 20 ನಿಮಿಷಗಳ ನಂತರ ದೈಹಿಕ ಚಟುವಟಿಕೆಯನ್ನು ಮಾಡಬೇಕು. ಒಣದ್ರಾಕ್ಷಿ ನೀರನ್ನು ಕುಡಿಯಬಹುದು. ಆದರೆ ಬಾದಾಮಿ ನೀರನ್ನು ಕುಡಿಯಬೇಡಿ. ನೀವು ಬಾಳೆಹಣ್ಣುಗಳನ್ನು ಇಷ್ಟಪಡದಿದ್ದರೆ, ಋತುಮಾನದ ಹಣ್ಣುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ.