Tuesday, July 22, 2025

Latest Posts

ಸಣ್ಣ ಉದ್ಯಮ ಶುರು ಮಾಡಿ, ತಿಂಗಳಿಗೆ 70ಸಾವಿರ ರೂಪಾಯಿ ಆದಾಯ ಗಳಿಸಿ..!

- Advertisement -

ಸಣ್ಣ ಉದ್ಯಮ ಮಾಡುವುದಕ್ಕೆ ಹಲವಾರು ಅವಕಾಶಗಳಿದೆ. ಅದನ್ನ ಸರಿಯಾಗಿ ಬಳಸಿಕೊಂಡ್ರೆ ಒಳ್ಳೆಯ ಲಾಭ ಪಡೆದುಕೊಳ್ಳಬಹುದು.

ಸಣ್ಣ ಉದ್ಯಮಗಳಲ್ಲಿ ಹಾಲಿನ ಡೈರಿ ನಡೆಸುವುದು ಕೂಡ ಒಂದು. ಅಡುಗೆಕೋಣೆಯಲ್ಲಿ ಹೆಚ್ಚಿನ ಇಂಪಾರ್ಟೆನ್ಸ್ ಪಡೆದುಕೊಂಡ ವಸ್ತು ಅಂದ್ರೆ ಹಾಲು. ಹಾಲಿನ ಉದ್ಯಮ ಶುರು ಮಾಡಿದ್ರೆ, ನೀವು ಒಳ್ಳೆಯ ಲಾಭ ಪಡೆದುಕೊಳ್ಳಬಹುದು. ಈ ಉದ್ಯಮಕ್ಕೆ ನೀವು 5 ಲಕ್ಷ ರೂಪಾಯಿ ಬಂಡವಾಳ ಹೂಡಿದ್ರೆ, ಪ್ರತಿ ತಿಂಗಳು 70,000 ರೂಪಾಯಿ ಆದಾಯ ಗಳಿಕೆ ಮಾಡಬಹುದು.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಮೂರು ರೀತಿಯ ಯೋಜನೆಗಳನ್ನ ರೂಪಿಸಲಾಗಿದೆ. ಮೊದವನೇಯದು ಶಿಶು, ಎರಡನೇಯದು ಕಿಶೋರ್, ಮೂರನೇಯದು ತರುಣ್. ಶಿಶು ಯೋಜನೆಯಡಿ 50,000 ರೂಪಾಯಿ ತನಕ ಲೋನ್ ತೆಗೆದುಕೊಳ್ಳಬಹುದು. ಕಿಶೋರ್ ಯೋಜನೆಯಡಿ 50,000 ರೂಪಾಯಿಯಿಂದ 5 ಲಕ್ಷದ ತನಕ ಲೋನ್ ತೆಗೆದುಕೊಳ್ಳಬಹುದು. ತರುಣ್ ಯೋಜನೆಯಡಿ 5 ಲಕ್ಷದಿಂದ 10 ಲಕ್ಷದ ತನಕ ಲೋನ್ ತೆಗೆದುಕೊಳ್ಳಬಹುದು.

ಇನ್ನು ಡೈರಿ ಉದ್ಯಮ ಶುರು ಮಾಡಲು ಸುಮಾರು 16ವರೆ ಲಕ್ಷ ಬೇಕಾಗಬಹುದು. ಹಾಲು, ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಹೀಗೆ ಎಲ್ಲದರ ವ್ಯಾಪಾರ ಶುರು ಮಾಡುವುದಾದರೆ 16ವರೆ ಲಕ್ಷ ಬೇಕಾಗುತ್ತದೆ. ನೀವು ನಿಮ್ಮ ಕೈಯಿಂದ 5 ಲಕ್ಷ ರೂಪಾಯಿ ಬಂಡವಾಳ ಹೂಡಿದ್ರೆ, ಮುದ್ರಾ ಯೋಜನೆಯಡಿ ಬ್ಯಾಂಕ್ ನಿಮಗೆ ಉಳಿದ 7ವರೆ ಲಕ್ಷ ಹಣವನ್ನ ಸಾಲವಾಗಿ ನೀಡತ್ತೆ. ಅಲ್ಲದೇ, 4 ಲಕ್ಷ ವರ್ಕಿಂಗ್ ಕ್ಯಾಪಿಟಲ್ ಆಗಿ ನೀಡತ್ತೆ.

16 ವರೆ ಲಕ್ಷ ಬಂಡವಾಳ ಹೂಡಿ, 75 ಲೀಟರ್ ಹಾಲು, 36 ಸಾವಿರ ಲೀಟರ್ ಮೊಸರು, 90 ಸಾವಿರ ಲೀಟರ್ ಮಜ್ಜಿಗೆ, 4,500 ಕೆಜಿ ತುಪ್ಪ ಮಾರಾಟ ಮಾಡಿದ್ರೆ, ವರ್ಷಕ್ಕೆ 82ವರೆ ಲಕ್ಷ ರೂಪಾಯಿ ಆದಾಯ ಬರುತ್ತದೆ.

82.5 ಲಕ್ಷ ವರ್ಷದ ಆದಾಯ ಬಂದರೆ, ಬಡ್ಡಿ, ಖರ್ಚು ವೆಚ್ಚ, ಜಾಗದ ಬಾಡಿಗೆ ಎಲ್ಲ ಸೇರಿ 74 ಲಕ್ಷ ಖರ್ಚಾದರೆ ವರ್ಷಕ್ಕೆ 8ವರೆ ಲಕ್ಷ ಲಾಭ ಗಳಿಸಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss