ಅನ್ನದಾತನನ್ನ ಬೆಂಬಲಿಸುವ ಉದ್ದೇಶದಿಂದ ಕೃಷಿ ಇಲಾಖೆ, ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇರುತ್ತೆ. ಇದೀಗ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಬೆಂಗಳೂರಿನ ನಾಗರಿಕರಲ್ಲೂ ಅರಿವು ಮೂಡಿಸುವ ಉದ್ದೇಶದಿಂದ, ಅಗ್ರಿವಾಕ್ ಆಯೋಜಿಸಿತ್ತು. ಈ ಕೃಷಿ ನಡಿಗೆ ಕಾರ್ಯಕ್ರಮ ಹೇಗಿತ್ತು. ಯಾರೆಲ್ಲಾ ಭಾಗಿಯಾಗಿದ್ರು. ಎಲ್ಲಿ ನಡೆಸಲಾಯ್ತು ಅನ್ನೋ ಡೀಟೆಲ್ಸ್ ಇಲ್ಲಿದೆ ನೋಡಿ.
ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಎಲ್ಲಿ ನೋಡಿದ್ರು ಹಸಿರು ಟೀಶರ್ಟ್ ಹಾಕಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ರು.. ಚುಮು ಚುಮು ಚಳಿಯಲ್ಲಿ ಮಕ್ಕಳೂ ಕೂಡ ಬಂದಿದ್ರು. ಇಡೀ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಜರಾಗಿದ್ರು. ಮುಖ್ಯವಾಗಿ ಕೃಷಿ ಚಲುವರಾಯಸ್ವಾಮಿ ಕೂಡ ಹಸಿರು ಟೀ ಶರ್ಟ್ ತೊಟ್ಟು ಪಾಲ್ಗೊಂಡಿದ್ರು.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ, ಫೆಬ್ರವರಿ 6, 7, 8ರಂದು ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ನಡೀತಿದೆ. ಈ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆ ಇಂದು ಕೃಷಿ ನಡಿಗೆ ಕಾರ್ಯಕ್ರಮವನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ6:30ಕ್ಕೆ ಪ್ರಾರಂಭವಾದ ಕೃಷಿ ನಡಿಗೆ ಕಾರ್ಯಕ್ರಮಕ್ಕೆ, ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದ್ರು. ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026ರ ಲೋಗೋವನ್ನೂ ಅನಾವರಣ ಮಾಡಿದ್ರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕಮಿಷನರ್ YS ಪಾಟೀಲ್, ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ ಪುತ್ರ, ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಅಶೋಕ್ ದಳವಾಯಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಬಂತನಾಳ್ ಹಾಗೂ ಸೆಕೆಂಡರಿ ಅಗ್ರಿಕಲ್ಚರಲ್ ನಿರ್ದೇಶಕ ವೆಂಕಟ್ ರಮಣ್ ರೆಡ್ಡಿ ಸೇರಿದಂತೆ ಕೃಷಿ ಇಲಾಖೆಯ ಎಲ್ಲಾ ನಿರ್ದೇಶಕರು ಮತ್ತು ಸಿಬ್ಬಂದಿ ಭಾಗಿಯಾಗಿದ್ರು.

ಇಷ್ಟೇ ಅಲ್ಲ.. ಕೃಷಿ ನಡಿಗೆ ಕಾರ್ಯಕ್ರಮದಲ್ಲಿ 4000ಕ್ಕೂ ಹೆಚ್ಚು ಜನರು ಭಾಗಿಯಾಗಿದ್ರು. ಚುಮುಚುಮು ಚಳಿಯಲ್ಲೂ ಬೆಳ್ಳಂಬೆಳಗ್ಗೆಯೇ ಕೃಷಿ ನಡಿಗೆಯ ಟೀ ಶರ್ಟ್ ಧರಿಸಿ ಭಾಗಿಯಾಗಿದ್ರು. ಇನ್ನು, ಮಕ್ಕಳು ಕೂಡ ಅಗ್ರಿವಾಕ್ನಲ್ಲಿ ಭಾಗಿಯಾಗಿದ್ದು ವಿಶೇಷ. ಕೃಷಿ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕಳೆದ ಹದಿನೈದು ದಿನಗಳಿಂದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳೆ ನಡೆಸುವ ಹಿನ್ನೆಲೆ ಪೂರ್ವಭಾವಿ ತಯಾರಿಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆಯಿಂದಲೇ ಕೃಷಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಾಣಿಜ್ಯ ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತಹ ಇನ್ನೂರಕ್ಕೂ ಹೆಚ್ಚು ಸ್ಟಾಲ್ ಗಳನ್ನು ಅಳವಡಿಸಲಾಗುತ್ತದೆ. ಅನೇಕ ಬ್ರಾಂಡಿಂಗ್ ಹಾಗೂ ಸಂಸ್ಕರಣೆ ಮಾಡುವಂತ ಕೃಷಿ ಬದಲಾವಣೆಗೆ ಪೂರಕವಾಗುವಂತಹ ತಾಂತ್ರಿಕ ಯಂತ್ರೋಪಕರಣಗಳ ಬಗ್ಗೆ ರೈತರಿಗೆ ಮಾಹಿತಿಗಳನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿಲಾಗುತ್ತದೆ ಎಂದರು.

ಇನ್ನು, ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಭಾಗವಹಿಸಲಿದ್ದು, ಕೇಂದ್ರ ಕೃಷಿ ಸಚಿವರಾದ
ಶಿವರಾಜ್ ಸಿಂಗ್ ಚೌಹಾಣ್ ಕೂಡ ಭಾಗವಹಿಸಲಿದ್ದಾರೆ ಅಂತಾ, ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ರು.
ಫೆಬ್ರವರಿ 6, 7 ಮತ್ತು 8ರಂದು ನಡೆಯುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ರಾಜ್ಯದ ಎಲ್ಲಾ ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಚಿವ ಚಲುವರಾಯಸ್ವಾಮಿ ಕರೆ ನೀಡಿದ್ರು. ಒಟ್ನಲ್ಲಿ ಅನ್ನ ನೀಡುವ ಅನ್ನದಾತನ ಕೈ ಬಲಪಡಿಸುವ ಉದ್ದೇಶದಿಂದ, ಕೃಷಿ ಇಲಾಖೆ ವಾಣಿಜ್ಯ ಮೇಳ ಆಯೋಜಿಸಿದೆ. ನಾಗರಿಕರೇ ಬನ್ನಿ.. ವಾಣಿಜ್ಯ ಮೇಳದಲ್ಲಿ ಭಾಗವಹಿಸಿ.. ರೈತರನ್ನು ಬೆಂಬಲಿಸಿ..
ವರದಿ : ಲಾವಣ್ಯ ಅನಿಗೋಳ




