Sunday, September 8, 2024

Latest Posts

ಡೆಂಘ್ಯೂ ಜ್ವರ ಎದುರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ: ಬಸವರಾಜ ಬೊಮ್ಮಾಯಿ

- Advertisement -

Gadag ಗದಗ: ಗದಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಡೆಂಘ್ಯೂ ಜ್ವರ ಎದುರಿಸಲು ಈ ಸರ್ಕಾರ ವಿಫಲವಾಗಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡೆಂಗ್ಯೂ ಜ್ವರ ಒಂದೂವರೆ ತಿಂಗಳಿಂದ ಪ್ರಾರಂಭ ಆಗಿದೆ. ಆರೋಗ್ಯ ಇಲಾಖೆ, ಡಾಕ್ಟರ್ ಗಳು, ಡಿ ಎಚ್ ಓ ಮುಂಜಾಗ್ರತೆ ಕ್ರಮ ತಗೋಬೇಕಿತ್ತು. ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ. ಹೊಸದಾಗಿ ಮಳೆ ಬಂದಾಗ ಮಳೆ ಬಂದಂತಹ ನೀರಿನಿಂದ ಬರತ್ತೆ. ಜಾಗೃತಿ ಮೂಡಿಸುವಂತಹ ಔಷಧಿ ಸಿಂಪಡಿಸುವಂತ ವ್ಯಾಪಕ ಅಭಿಯಾನ ಮಾಡಬೇಕಿತ್ತು ಅದನ್ನೂ ಮಾಡಿಲ್ಲ. ಡೆಂಗ್ಯೂ ಜ್ವರ ಬಂದ್ರೂ ಕೂಡಾ ಅವುಗಳನ್ನ ಬೇರೆ ಕೆಟಗರಿಯಲ್ಲಿ ಹಾಕಿ ಡೆಂಗ್ಯೂ ಸಂಖ್ಯೆ ಕಡಿಮೆ ಇದೆ ಅಂತಾ ತೊರಿಸೋ ಪ್ರಯತ್ನ ಮಾಡಿದ್ರು ಎಂದಿದ್ದಾರೆ.

ಟೆಸ್ಟ್ ಗಳನ್ನೂ ಕಡಿಮೆ ಮಾಡಿದ್ದಾರೆ, ಈಗಲೂ ಟೆಸ್ಟ್ ಕಡಿಮೆ ಆಗ್ತಾ ಇದೆ. ಬಹಳ ದೊಡ್ಡ ಪ್ರಮಾಣದಲ್ಲಿ ವ್ಯಾಪಕವಾಗಿ ಈ ಬಾರಿ ಆಗಿದೆ. ಅಧಿಕೃತ ಸಂಖ್ಯೆಯೇ 7 ಸಾವಿರ ಇದೆ. ಸತ್ಯ ಹೇಳಬೇಕಂದ್ರೆ ಅದರ ಎರಡು ಪಟ್ಟು ಡೆಂಗ್ಯೂನಿಂದ ಬಳಲ್ತಿರೋ ಪೇಶಂಟ್ಸ್ ಜಾಸ್ತಿ ಇದ್ದಾರೆ. ಪ್ರೈವೇಟಲ್ಲಿ ಬಹಳ ಜನ ಇದ್ದರೆ ಸಾವು ನೋವು ಆಗ್ತಾ ಇದೆ. ಆರೋಗ್ಯ ಇಲಾಖೆ, ಮಂತ್ರಿಗಳು ಕೇವಲ ಸಭೆ ಮಾಡಿ ಎಲ್ಲವೂ ಸರಿ ಆಗತ್ತೆ ಅನ್ನೋ ಭಾವನೆಯಲ್ಲಿದ್ದಾರೆ. ಮೊದಲು ಟೆಸ್ಟ್ ಮಾಡಬೇಕು, ಅದಕ್ಕೆ ಸಂಬಂಧಪಟ್ಟ ಔಷಧಿ ಕೊಡಬೇಕು, ಟ್ರಿಟ್ ಮೆಂಟ್ ಮಾಡಬೇಕು. ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲ, ತಾಲೂಕಾ ಆಸ್ಪತ್ರೆಯಲ್ಲಿ ಕೇಳೋರಿಲ್ಲ. ಡೆಂಗ್ಯೂ ಜ್ವರ ಎದುರಿಸಲು ಈ ಸರ್ಕಾರ ವಿಫಲವಾಗಿದೆ. ಸಾರ್ವಜನಿಕರು ಬಡವರು ಇದರಿಂದ ಬಹಳಷ್ಟು ಸಾವು ನೋವುಗಳಾಗಿದೆ.

ಇದು ಅತ್ಯಂತ ಚಿಂತಾಜನಕವಾಗಿರೋ ಪರಿಸ್ಥಿತಿ. ಕೂಡಲೇ ವಾರ್ ಫುಟಿಂಗಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಟಾಸ್ಕ್ ಫೋಸ್೯ ಮಾಡಿ ಡೆಂಗ್ಯೂ ಜ್ವರಕ್ಕೆ ಕ್ರಮ ತಗೋಬೇಕು. ಬಹಳ ದೊಡ್ಡ ಪ್ರಮಾಣದಲ್ಲಿ ಹಬ್ಬಿದ್ರೆ ಮುಂದೆ ಅದು ಬೇರೆ ಬೇರೆ ರೋಗಕ್ಕೂ ಕನ್ವರ್ಟ ಆಗತ್ತೆ. ಚಿಕನ್ ಗುನ್ಯಾ ತರ ಆಗಿ ಬಿಟ್ರೆ ಬಹಳಷ್ಟು ಜನರಿಗೆ ತೊಂದರೆ ಆಗತ್ತೆ. 6 ತಿಂಗಳು 8 ತಿಂಗಳು ಒಂದು ವರ್ಷ ಅನುಭವಿಸಬೇಕಾಗತ್ತೆ. ಆರೋಗ್ಯ ಇಲಾಖೆ, ಸಚಿವರಿಗೆ ಒತ್ತಾಯ ಮಾಡ್ತೇನೆ ಇದನ್ನ ವಾರ್ ಫುಟಿಂಗಲ್ಲಿ ತಗೊಂಡು ಎಲ್ಲ ಜಿಲ್ಲೆ ಗಮನಿಸಿ. ಅಧಿಕಾರಿಗಳಿಗೆ ಸೂಚನೆ ಕೊಡಿ. ಟೆಸ್ಟಿಂಗ್, ಚುಚ್ಚುಮದ್ದು ದೊಡ್ಡ ಪ್ರಮಾಣದಲ್ಲು ಮಾಡಿ ಎಮರ್ಜೆನ್ಸಿ ಅಂತಾ ತಿಳಿದು ಸಪ್ಲೈ ಮಾಡಿ ಕೆಲಸ ಮಾಡಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.

- Advertisement -

Latest Posts

Don't Miss