ಕೆರೆಗೆ 2 ಬಲಿ : ಮುಳುಗಿತ್ತಿದ್ದವನನ್ನ ಬದುಕಿಸಲು ಹೋಗಿ ಶವವಾದ ಯುವಕ

ಕರ್ನಾಟಕ ಟಿವಿ ಮಂಡ್ಯ : ಕೆ.ಆರ್ ಪೆಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳಿಗಂಗನಹಳ್ಳಿ ಕೆರೆಯಲ್ಲಿ ಇಂದು ಬೆಳಿಗ್ಗೆ ಹಸು ತೊಳೆಯಲು ಗ್ರಾಮದ ಕೆರೆಯಲ್ಲಿ 15ವರ್ಷದ ಅಭಿಷೇಕ್ ಎಂಬ ಯುವಕ ದನಗಳನ್ನು ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಮುಳುಗುತ್ತಿದ್ದ ವೇಳೆಯಲ್ಲಿ 27ವರ್ಷವಯಸ್ಸಿನ ಯುವಕ ಎಂಬ ಯುವಕ  ಮುಳಗುತ್ತಿದ್ದಅಭಿಷೇಕ್ ನನ್ನ ಬದುಕಿಸಲು ತೆರಳಿ ಆತನೂ ಸಾವಿಗೀಡಾಗಿರುವ ದಾರುಣ ಘಟನೆ ಇಂದು ನಡೆದಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆಯ ಪಿಎಸ್ ಐ ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

About The Author