www.karnatakatv.net ಮಂಡ್ಯ : ಮಂಡ್ಯದಲ್ಲಿ ಇದೀಗ ಸಕ್ಕರೆ ಕಾರ್ಖಾನೆ ವಿಚಾರ ಭಾರೀ ಕಾವು ಪಡೆದುಕೊಳ್ತಿದೆ. ಮೈಷುಗರ್ ಹಾಗೂ ಪಿಎಸ್ ಎಸ್ ಕೆ ಸ್ಥಗಿತಗೊಂಡಿರುವ ಕಾರಣ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ.. ಇದೀಗ ಪಿಎಸ್ ಎಸ್ ಕೆಯನ್ನ ನಿರಾಣಿ ಷುಗರ್ಸ್ ಗೆ 40 ವರ್ಷ ಗುತ್ತಿಗೆ ನೀಡಲಾಗಿದೆ. ಮೈಷುಗರ್ ಸಹ ಆರಂಭ ಮಾಡಿಸಲು ಸಂಸದೆ ಸುಮಲತಾ ಸತತ ಪ್ರಯತ್ನ ಪಡ್ತಿದ್ದಾರೆ. ಇತ್ತ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಯಾರಾದರೂ ಸರಿ ಕಬ್ಬು ಕಟಾವು ಮಾಡಿ ಸರಿಯಾದ ಟೈಂಗೆ ಸರಿಯಾದ ಬೆಲೆ ಕೊಟ್ರೆ ಸಾಕು ಅಂತ ನಿರ್ಧರಿಸಿದ್ದಾರೆ.
ಅಕ್ರಮ ಕಲ್ಲುಗಣಿಗಾರಿಗೆ ವಿರುದ್ಧ ಕಣ್ಮುಚ್ಚಿ ಕುಳಿತಿದ್ದಾರೆ.. ಸಕ್ಕರೆ ಕಾರ್ಖಾನೆಗೆ ಅಡ್ಡಿಯಾಗ್ತಿದ್ದಾರೆ..!
ಈ ನಡುವೆ ಕೆಲ ಹೋರಾಟಗಾರರು ಮೈಷುಗರ್ ಸರ್ಕಾರವೇ ಶುರುಮಾಡಬೇಕು ಅಂತ ಪ್ರತಿಭಟನೆ ಮಾಡ್ತಿದ್ದಾರೆ.. ಆದ್ರೆ, ಸರ್ಕಾರ ಸದ್ಯಕ್ಕೆ ಕಾರ್ಖಾನೆಯನ್ನ ತಾನೇ ನಡೆಸಲು ಸಿದ್ಧರಿಲ್ಲ. ಖಾಸಗಿಯವರಿಗೆ ಕೊಟ್ಟು ರೈತರ ಕಬ್ಬನ್ನ ಅರೆಸುವ ಮೂಲಕ ರೈತರಿಗೆ ಸರಿಯಾದ ಟೈಂ ಗೆ ಹಣ ಹಾಗೂ ಸರಿಯಾದ ಬೆಲೆ ಕೊಡಿಸಲು ಮುಂದಾಗಿದೆ. ಇದೀಗ ಸರ್ಕಾಋ ನಡೆಸಿದ್ರೆ ಮಾತ್ರ ಫ್ಯಾಕ್ಟರಿ ಓಪನ್ ಮಾಡಲಿ, ಇಲ್ಲದಿದ್ರೆ ಬೇಡವೇ ಬೇಡಬೇಡ ಅಂತ ಹೆಳಿಕೆ ನೀಡ್ತಿದ್ದಾರೆ. ರೈತರ ಹಿತಕ್ಕಿಂತ ಕೆಲ ಹೋರಾಟಗಾರರಿಗೆ ರಾಜಕಾರಣವೇ ಮುಖ್ಯವಾಗಿದೆ ಎಂದು ಮಂಡ್ಯ ಜಿಲ್ಲಾ ಸ್ವಾಭಿಮಾನಿ ಪಡೆಯ ಅಧ್ಯಕ್ಷ ಹೆಚ್.ಪಿ.ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಇದೇ ವೇಳೆ ಸುನಂದಾ ಜಯರಾಂ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಖಾಸಗಿ ವಕ್ತಾರರು ಎಂದು ಹೇಳಿರುವುದು ಸರಿಯಲ್ಲ ಅಂತ ತಾಕೀತು ಮಾಡಿದ್ದಾರೆ..
ಪ್ರವಿಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ