Hubli News: ಹುಬ್ಬಳ್ಳಿ: ಮಗನ ಕೊಲೆಗೆ ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಸೂಕ್ತವಾದ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ದಲಿತ ಮುಖಂಡ, ಕುಟುಂಬ ಸಮೇತವಾಗಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂದೆ ತಡರಾತ್ರಿ ವರೆಗೂ ಧರಣಿ ಕೂತ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮಾರುತಿ ದೊಡ್ಮನಿ ಎಂಬುವರು ತಮ್ಮ ಮಗ ಅನೂಪ್‌ಗೆ ಚಾಕುವನ್ನು ತೋರಿಸಿ ಕೊಲೆ ಮಾಡಲು ಮುಂದಾಗಿದ್ದರು ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಎನ್ ದಾಖಲು ಮಾಡಿಕೊಂಡು ಮಾರುತಿ ಕೋರ್ಟ್ ಅನುಮತಿ ಪಡೆದು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಆಕಾಶ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಕೋರ್ಟ್ ಆದೇಶದ ಮೇರೆಗೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಆರೋಪಿ ಆಕಾಶನನ್ನು ಶನಿವಾರ ಬೆಳ್ಳಿಗ್ಗೆ ಠಾಣೆಗೆ ಕರೆಯಿಸಿ ಸಂಜೆವರೆಗೂ ವಿಚಾರಣೆ ಮಾಡಿ, ಆರೋಪಿಗೆ ಸ್ಟೇಶನ್ ಬೆಲ್ ನೀಡಿ ಕಳಿಸಿದ್ದರು.
ಹೀಗಾಗಿ ದೂರು ಕೊಟ್ಟ ಮಾರುತಿ ನನಗೆ ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ, ನನ್ನ ಮಗನನ್ನು ಕೊಲ್ಲಲು ಬಂದವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.
ಹೀಗಾಗಿ ನನಗೆ ನ್ಯಾಯಬೇಕು ಅಂತಾ ಮಾರುತಿ ತನ್ನ ಹೆಂಡತಿ, ಮಗಳು, ಹಾಗೂ ಮಗನ ಸಮೇತ ಠಾಣೆಯ ಮುಂಭಾಗದಲ್ಲಿ ಧರಣಿಗೆ ಕೂತಿದ್ದ.
ಈ ಸಂದರ್ಭದಲ್ಲಿ ಠಾಣೆಗೆ ಬಂದಿದ್ದ ಇಸ್ಪೆಕ್ಟರ್ ಸುರೇಶ ಯಳ್ಳುರ ಮುಂದೆ ಇಲಾಖೆಯ ಸಿಬ್ಬಂದಿಗೆ ಏಕವಚನದಲ್ಲಿ ಮಾರುತಿ ದೊಡಮನಿ ಮಾತನಾಡಿದ ಪರಿಣಾಮ, ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿತ್ತು.
ಈ ವೇಳೆ ಮಾರುತಿ ಬೇಕಿದ್ರೆ ನೀವು ನನ್ನನ್ನು ಗುಂಡು ಹಾಕಿ ಕೊಲೆ ಮಾಡಿ ಎಂದು ಪೊಲೀಸ್ ಅಧಿಕಾರಿಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಪರಿಸ್ಥಿಯನ್ನು ಶಾಂತಗೊಳಿಸುವ ಕಾರ್ಯವನ್ನು ಮಾಡಿದ್ದಾರೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




