Thursday, August 21, 2025

Latest Posts

300 ಕೋಟಿ ಹಗರಣ ಹೊರತೆಗೆದ ಎಸ್‌ಟಿಎಫ್‌!

- Advertisement -

ಜಗತ್ತಿನ ನಕ್ಷೆಯಲ್ಲೇ ಇಲ್ಲದ ರಾಷ್ಟ್ರಗಳ ರಾಯಭಾರಿ ಕಚೇರಿಗಳನ್ನು ನಿರ್ಮಿಸಿ, ರಾಜತಾಂತ್ರಿಕ ವೇಷಧಾರಣೆಯಲ್ಲಿದ್ದು, ಭಾರತೀಯರಿಗೆ ವಿದೇಶೀ ಸಂಪರ್ಕದ ಆಸೆ ತೋರಿಸಿ, ದಶಕದ ಕಾಲದಿಂದ 300 ಕೋಟಿ ರೂಪಾಯಿ ವಂಚಿಸಿ, 162 ಬಾರಿ ಫಾರಿನ್‌ ಟ್ರಿಪ್‌ ಮಾಡಿರುವ ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಇದಕ್ಕೆಲ್ಲ ರೂವಾರಿ ಹರ್ಷವರ್ಧನ್ ಜೈನ್ – ಒಂದು ಕಾಲದಲ್ಲಿ ಹೈ ಪ್ರೊಫೈಲ್ ವ್ಯಕ್ತಿಗಳ ಜೊತೆ ಕಾಣಿಸಿಕೊಂಡಿದ್ದ, ರಾಜತಾಂತ್ರಿಕ ಕಾರುಗಳ ಮೇಲೆ ಧ್ವಜಗಳೊಂದಿಗೆ ಓಡುತ್ತಿದ್ದ ಈ ವ್ಯಕ್ತಿ, ಹೀಗೊಂದು ಜಾಲ ಹೆಣೆದಿದ್ದಾನೆ ಅಂತ ಯಾರೂ ಊಹಿಸಿರಲಿಲ್ಲ.

ಈತನ ಬಗ್ಗೆ ತನಿಖೆ ಆರಂಭವಾದದ್ದು, ಉತ್ತರ ಪ್ರದೇಶ STF ಗೆ ಕೆಲವು ಶಂಕಾಸ್ಪದ ದಾಖಲೆಗಳು ಸಿಕ್ಕಿದ ನಂತರ. ಗಾಜಿಯಾಬಾದ್‌ನಲ್ಲಿ ವಿದೇಶಿ ರಾಷ್ಟ್ರಗಳ ರಾಯಭಾರ ಕಚೇರಿಗಳಂತೆ ರೂಪಿಸಿರುವ ಕಚೇರಿ, ನಕಲಿ ಪಾಸ್‌ಪೋರ್ಟ್, ವೀಸಾ ಸ್ಟಾಂಪ್‌ಗಳು, ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳ ಕಾರುಗಳು, ಎರಡು ನಕಲಿ ಪ್ರೆಸ್ ಕಾರ್ಡ್‌ಗಳು, 44.7 ಲಕ್ಷ ರೂ. ನಗದು – ಎಲ್ಲವನ್ನೂ ನೋಡಿ ಅಧಿಕಾರಿಗಳೇ ನಿಬ್ಬೆರಗಾಗಿದ್ದಾರೆ.

ಹರ್ಷವರ್ಧನ್ ತನ್ನ ಜಾಲವನ್ನು ಹೆಣೆಯಲು ಕಲ್ಪನೆಗೂ ಮೀರಿದ ದೇಶಗಳನ್ನ ಸೃಷ್ಟಿಸಿದ್ದ. ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾ ಈ ದೇಶಗಳು ನಿಜಕ್ಕೂ ಜಗತ್ತಿನಲ್ಲಿ ಇಲ್ಲವೇ ಇಲ್ಲ. ಆದರೆ ಇವೆಲ್ಲವನ್ನು ನಂಬುವಂತಂತೆ ಮೇಕ್‌ ಶೂರ್ ಮಾಡಿದ ಹರ್ಷವರ್ಧನ್, ಜನರಿಂದ ಹಣ ಸಂಗ್ರಹಿಸಿ, ಅನ್ಯ ಸಂಸ್ಥೆಗಳಿಗೆ ರಾಜತಾಂತ್ರಿಕ ಸಂಪರ್ಕವಿದೆ ಎಂದು ತಪ್ಪುಪ್ರಚಾರ ಮಾಡಿ, ಭರ್ಜರಿ ಹಣ ಕಲೆಹಾಕಿದ್ದ.

ಆತ 25 ನಕಲಿ ಕಂಪನಿಗಳನ್ನು ಸಯೀದ್ ಜೈನ್ ಎಂಬ ವ್ಯಕ್ತಿಯೊಂದಿಗೆ ತೆರೆದಿದ್ದ. ಈ ಸಯೀದ್ ಹೈದರಾಬಾದ್‌ನವನಾಗಿದ್ದು ಈಗ ಟರ್ಕಿಯ ಪ್ರಜೆ. ಆತ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ‘ವೆಸ್ಟರ್ನ್ ಅಡ್ವೈಸರಿ ಗ್ರೂಪ್’ ಎಂಬ ನಕಲಿ ಕಂಪನಿಯ ಮೂಲಕ ಹಣಕಾಸು ಸಲಹೆ ನೀಡಿ ಸುಮಾರು 300 ಕೋಟಿ ರೂಪಾಯಿ ವಂಚಿಸಿದ್ದ.

ಆತ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಂಧೆಗಾರ ಅದ್ನಾನ್ ಖಶೋಗ್ಗಿ ಮತ್ತು ಪ್ರಸಿದ್ಧ ತಾಂತ್ರಿಕ ಚಂದ್ರಸ್ವಾಮಿ ಅವರ ಸಂಪರ್ಕದಲ್ಲಿದ್ದ. UP STF ತನಿಖೆಯಲ್ಲಿ ಇವನು ವಿದೇಶಿ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ ಅನ್ನೋದು, ಶೆಲ್ ಕಂಪನಿಗಳ ಮೂಲಕ ಹವಾಲಾ ಹಣದ ವ್ಯವಹಾರಗಳಲ್ಲಿ ತೊಡಗಿದ್ದ ಅನ್ನೋದು ಬಹಿರಂಗವಾಗಿದೆ.

ಅದರ ಜೊತೆಗೆ, ಹರ್ಷವರ್ಧನ್ ಮೋದಿ, ಪ್ರಣಬ್ ಮುಖರ್ಜಿ ಮತ್ತು ಇತರ ಗಣ್ಯರ ಫೋಟೋಗಳನ್ನು ಮಾಫ್ ಮಾಡಿ ಬಳಸಿಕೊಂಡು ಜನರಲ್ಲಿ ನಂಬಿಕೆ ಮೂಡಿಸುತ್ತಿದ್ದ. 2011ರಲ್ಲಿ ಹರ್ಷವರ್ಧನ್ ಬಳಿ ಅಕ್ರಮ ಸ್ಯಾಟಲೈಟ್ ಫೋನ್ ಕೂಡ ಪತ್ತೆಯಾಗಿತ್ತು. ಕೊನೆಗೆ 2023ರಲ್ಲಿ UP STF ಆತನನ್ನು ಬಂಧಿಸಿತ್ತು. ಆದ್ರೆ ಮತ್ತೆ ಈಗ ತನಿಖೆ ಮುಂದುವರೆದಿದ್ದು, ಇದರ ಹಿಂದೆ ಇನ್ನೂ ದೊಡ್ಡ ಮಾಫಿಯಾ ಇದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ.

- Advertisement -

Latest Posts

Don't Miss