Saturday, April 5, 2025

Latest Posts

ವಂದೇ ಭಾರತ್ ರೈಲಿಗೆ ಕಲ್ಲೆಸೆತ: ಇಬ್ಬರು ಮಕ್ಕಳು ಪೊಲೀಸರ ವಶಕ್ಕೆ

- Advertisement -

District News: ದಾವಣಗೆರೆ: ವಂದೇ ಭಾರತ್ ರೈಲಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಕ್ಕಳಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರೈಲ್ವೆ ಪೊಲೀಸರು ದಾವಣಗೆರೆಯಲ್ಲಿ ಮಕ್ಕಳನ್ನು  ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರು  12 ವರ್ಷದವರು ಎಂದು ತಿಳಿದು ಬಂದಿದೆ.ಜುಲೈ 1ರಂದು ದಾವಣಗೆರೆ ನಗರದ ಹೊರವಲಯದ ಜಿಎಂಐಟಿ ಹಿಂಭಾಗದಲ್ಲಿ ಈ ಘಟನೆ ನಡೆದಿತ್ತು. ಕಲ್ಲಿನ ಏಟಿಗೆ ಕಿಟಕಿಯ ಗಾಜಿನಲ್ಲಿ ಬಿರುಕು ಬಿಟ್ಟಿದೆ.

ಈ ಇಬ್ಬರು ಮಕ್ಕಳು ದಾವಣಗೆರೆಯ ಎಸ್‌ಎಸ್ ನಗರ ಹಾಗೂ ಭಾಷಾ ನಗರದವರು ಎಂದು ತಿಳಿದು ಬಂದಿದೆ. ಯಾಕೆ ಕಲ್ಲು ಎಸೆದಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ದಾವಣಗೆರೆ ರೈಲ್ವೆ ಪೊಲೀಸರು ಸದ್ಯ ಇಬ್ಬರನ್ನು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಲಾಗಿದೆ. ಕಲ್ಲೆಸೆದ ಬಳಿಕ ಇಬ್ಬರು ಬಾಲಕರು ಎಸ್ಕೇಪ್ ಆಗಿದ್ದರು.

ಕಲ್ಲು ತೂರಾಟದಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಈ ಕುರಿತು ರೈಲ್ವೆ ಆರ್‌ಪಿಎಫ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ: ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳು

30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ

ಸೀಟ್ ಹಿಡಿಯಲು ವಿದ್ಯಾರ್ಥಿಗಳ ಸರ್ಕಸ್: ವಿಂಡೋ ರಾಡ್ ನಿಂದ ಕೈಗೆ ಹೊಡೆತ..!

- Advertisement -

Latest Posts

Don't Miss