Wednesday, July 16, 2025

Latest Posts

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು, ಪೊಲೀಸರಿಂದ ಹಣ ವಸೂಲಿ..!

- Advertisement -

Dharwad News: ಧಾರವಾಡ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುವ ದಂಧೆ ಜೋರಾಗಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಪುನಾ ಬೆಂಗಳೂರ್ ಧಾರವಾಡದ ನರೇಂದ್ರ ಕ್ರಾಸ್ ಟೋಲ್ ಹತ್ತಿರ ಈ ದೃಷ್ಯ ಕಂಡುಬಂದಿದ್ದು, ವಾಹನ ತಪಾಸಣೆ ಮಾಡುವ ನೆಪದಲ್ಲಿ ಹೈವೆಯಲ್ಲಿ ನಿಂತಿರುವ ಪೊಲೀಸರು, ವಾಹನ ಸವಾರರನ್ನು ನಿಲ್ಲಿಸಿ, ಅವರಿಗೆ ರಷೀದಿ ಕೊಡದೇ, ಹಣ ಪಡೆದುಕೊಳ್ಳುತ್ತಿದ್ದಾಾರೆ.

ಲಾರಿಗಳನ್ನು ತಡೆಯುವ ಪೊಲೀಸರು ವಾಹನ ತಪಾಸಣೆ ನಡೆಸುವ ನೆಪವೊಡ್ಡಿ, ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಕಟ್ಟಿದ್ದಕ್ಕೆ ರಷೀದಿಯನ್ನು ಕೊಡದೇ ಹಾಗೇ ಕಳುಹಿಸುತ್ತಿದ್ದಾರೆ. ಪೊಲೀಸರ ಜೊತೆ ಹೋಮ್‌ ಗಾರ್ಡ್ ಕೂಡ ಹಣ ವಸೂಲಿಗೆ ಇಳಿದಿರೋದು ವಿಪರ್ಯಾಸದ ಸಂಗತಿ.

ಬರೀ ಲಾರಿ ಅಷ್ಟೇ ಅಲ್ಲದೇ, ಹೈವೆಯಲ್ಲಿ ಹೋಗುವ ಕಾರ್, ಬೈಕ್, ಗೂಡ್ಸ್ ಗಾಡಿ ತಡೆದು ಹಗಲು ದರೋಡೆ ಮಾಡಲಾಗುತ್ತಿದೆ. ಇದರಲ್ಲಿ ಯಾರ ಬಳಿ ಸರಿಯಾಗಿ ಲೈಸೆನ್ಸ್, ಹೆಲ್ಮೆಟ್ ಸೇರಿ ಇತ್ಯಾದಿ ತಪ್ಪು ಮಾಡಿದ್ದಾರೋ ಅಂಥವರ ವಿರುದ್ಧ ಕೇಸ್ ಹಾಕಬೇಕಾಗುತ್ತದೆ. ಅಥವಾ ದಂಡ ವಿಧಿಸಿ, ರಷೀದಿ ಕೊಡಲಾಗುತ್ತದೆ. ಆದರೆ ಇಲ್ಲಿ ಬರೀ ಹಣ ಪಡೆದ ಪೊಲೀಸರು ಕೇಸ್ ಹಾಕದೇ, ಅಥವಾ ಪಡೆದ ಹಣಕ್ಕೆ ರಷೀದಿಯೂ ಕೊಡದೇ ಹಾಗೆ ಕಳುಹಿಸುತ್ತಿದ್ದಾರೆ. ಈ ವಸೂಲಿ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

- Advertisement -

Latest Posts

Don't Miss