ಉತ್ತರಪ್ರದೇಶದ ಮಥುರಾದಲ್ಲಿ ಪ್ರಸಾದಕ್ಕಿಟ್ಟ ಹಣ್ಣುಗಳನ್ನ ಕದ್ದರು ಎಂಬ ಆರೋಪದ ಮೇಲೆ ಇಬ್ಬರು ಮಕ್ಕಳನ್ನ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ.

ಜುಲೈ 24ರಂದು ಈ ಘಟನೆ ನಡೆದಿದ್ದು, ಶಾಲೆಯಲ್ಲಿ ನಡೆಯಬೇಕಾಗಿದ್ದ ಪೂಜೆಗೆಂದು ಹಣ್ಣು ಹಂಪಲುಗಳನ್ನ ತಂದಿರಿಸಲಾಗಿತ್ತು. ಈ ವೇಳೆ ಇಬ್ಬರು ಮಕ್ಕಳು ಹಣ್ಣುಗಳಲ್ಲಿ ಕೆಲ ಹಣ್ಣುಗಳನ್ನ ಯಾರಿಗೂ ಗೊತ್ತಾಗದ ಹಾಗೆ ತೆಗೆದು ತಿಂದಿದ್ದಾರೆ.
ಈ ವಿಷಯ ಇಬ್ಬರು ಯುವಕರಿಗೆ ಗೊತ್ತಾಗಿದೆ. ಆ ಯುವಕರು ಬಾಲಕರನ್ನು ಎಳೆದು ತಂದು ಕೈ ಕಾಲನ್ನ ಕಟ್ಟಿಹಾಕಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ.
ಈ ವಿಷಯ ಬಾಲಕರ ಪೋಷಕರಿಗೆ ಗೊತ್ತಾಗಿ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಥಳಿಸಿದ ಯುವಕರು ಜೈಲು ಸೇರಿದ್ದಾರೆ. ಅಲ್ಲದೇ ಯುವಕರ ವಿರುದ್ಧ ಎಫ್ಐಆರ್ ಮಾಡಲಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

