district story : Hassan
ನಾಯಿಗಳ ಹೆಚ್ಚಳದಿಂದ ರಸ್ತೆಯಲ್ಲಿ ನಡೆದಾಡುವಾಗಿಲ್ಲ, ವಾಹನ ಚಾಲನೆ ಮಾಡುವುದೇ ಕಷ್ಟಕರವಾಗಿದೆ. ನಿಯಂತ್ರಣಕ್ಕೆ ಮುಂದಾದರೇ ಪ್ರಾಣಿ ದಯಾಮಯ ಸಂಘದವರು ಕಾನೂನು ಮೊರೆ ಹೋಗುತ್ತಿದ್ದು, ಇದರಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಸಭೆಗೆ ದಯಾಮಯ ಸಮಿತಿಯ ಸದಸ್ಯರನ್ನು ಕರೆದು ಚರ್ಚೆ ಮಾಡಬೇಕೆಂದು ನಗರಸಭೆಯ ಬಹುತೇಕ ದಸ್ಯರು ಒಕ್ಕರಲಿನಿಂದ ಮನವಿ ಮಾಡಿದರು.
ನಗರಸಭೆ ಕುವೆಂಪು ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಆರ್. ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ೩೫ ವಾರ್ಡ್ಗಳಲ್ಲೂ ನಾಯಿಗಳ ಹಾವಳಿಯಿಂದ ಆಗುತ್ತಿರುವ ಅಪಾಯದ ಬಗ್ಗೆ ಸದಸ್ಯರುಗಳು ಗಮನಸೆಳೆದರು. ದಾರಿಯಲ್ಲಿ ಯಾರು ನಡೆದಾಡುವಾಗಿಲ್ಲ. ಒಂದೊಂದು ಬಾರಿಗೆ ಒಟ್ಟಿಗೆ ೧೫ ರಿಂದ ೨೦ ನಾಯಿಗಳು ಪಾದಚಾರಿಗಳನ್ನು ಅಡ್ಡಗಟ್ಟಿ ಕಚ್ಚಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇನ್ನು ಅದೆಷ್ಟೊ ಮಕ್ಕಳು ನಾಯಿಯಿಂದ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ. ಇಷ್ಟೆಲ್ಲಾ ದುರಂತಗಳು ನಡೆಯುತ್ತಿದ್ರೂ ನಗರಸಭೆಯು ಇದುವರೆಗೂ ಯಾವ ಕ್ರಮಕೈಗೊಂಡಿರುವುದಿಲ್ಲ. ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದರೂ ಯಾವ ಪ್ರಯೋಜನವಾಗಿರುವುದಿಲ್ಲ. ನಾಯಿ ಕಾಟದ ಬಗ್ಗೆ ಪ್ರಶ್ನೆ ಮಾಡಿದರೇ ಪ್ರಾಣಿ ದಯಾಮಯ ಸಮಿತಿಯವರು ಅಡ್ಡಿ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಉತ್ತರ ಕೊಡುತ್ತಿದ್ದಾರೆ. ಈಗಲೆ ಸಮಿತಿಯ ಸದಸ್ಯರನ್ನು ಈ ಸಭೆಗೆ ಕರೆಯಿಸಿ ಚರ್ಚಿಸಿ ನಾಯಿಗಳ ಕಾಟಕ್ಕೆ ಅಂತ್ಯವಾಡಬೇಕೆಂದು ನಗರಸಭೆಯ ಬಹುತೇಕ ಸದಸ್ಯರು ಒಟ್ಟಿಗೆ ಬೆಂಬಲ ಸೂಚಿಸಿದರು.
ಪ್ರಸ್ತುತದಲ್ಲಿ ನರ್ಸಿಂಗ್ ಹಾಸ್ಪೇಟಲ್, ಹೋಟೆಲ್ ಮಾಲೀಕರು ನಗರಸಭೆಯ ಕೆಲ ಜಾಗವನ್ನು ಒತ್ತುವರಿ ಮಾಡಿದ್ದು, ಕೂಡಲೇ ಪರಿಶೀಲಿಸಿ ಸೂಕ್ರಕ್ರಮ ಜರುಗಿಸಬೇಕು. ಅನೇಕ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹೆಚ್ಚು ಕಂಡು ಬರುತ್ತಿದೆ. ಅಲ್ಲಿ ಕೂಡಲೇ ನೀರನ್ನು ಒದಗಿಸಬೇಕಾಗಿದೆ. ನಗರದ ವಿವಿಧ ಕಡೆಗಳಲ್ಲಿ ಯುಜಿಡಿ ಸಂಪರ್ಕದ ಸಮಸ್ಯೆ ಎದ್ದು ಕಾಣಿಸುತ್ತಿದ್ದು, ಈಬಗ್ಗೆ ಅಧಿಕಾರಿಗಲ ಗಮನಕ್ಕೆ ತರಲಾಗಿದ್ದರೂ ಯಾವ ಪ್ರಯೋಜವಾಗಿರುವುದಿಲ್ಲ ಎಂದರು. ಮನೆಗಳ ಬಳಿಯೇ ವಿದ್ಯುತ್ ತಂತಿಗಳು ಹಾದು ಹೋಗಿ ಅನೇಕ ದುರಂತಗಳು ನಡೆದಿದ್ದು, ಕೆಲ ತಿಂಗಳ ಹಿಂದೆ ಮನೆ ಮುಂದೆ ವಿದ್ಯುತ್ ತಂತಿಗೆ ತಗಲಿ ವೈದ್ಯನೋರ್ವ ಸಾವನಪ್ಪಿದ್ದು, ಈತರ ಅನೇಕ ದುರ್ಘಟನೆಗಳು ನಡೆದಿರುವುದರಿಂದ ಕೂಡಲೇ ಗಮನಹರಿಸಿ ಮನೆ ಮುಂದೆ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಸೇಪ್ಟಿ ಪೈಪನ್ನು ಹಾಕಲು ಕ್ರಮವಹಿಸುವಂತೆ ಮನವಿ ಮಾಡಲಾಯಿತು. ಇದೆ ರೀತಿ ನಗರಸಭೆ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಇದೆ ವೇಳೆ ನಗರಸಭೆ ಸದಸ್ಯರು ಗಮನಸೆಳೆದು ಕೂಡಲೇ ಕಾರ್ಯನಿರ್ವಹಿಸಲು ಒತ್ತಾಯಿಸಲಾಯಿತು.
ನಗರಸಭೆಯ ಸಾಮಾನ್ಯಸಭೆಯಲ್ಲಿ ಆಯುಕ್ತರಾದ ಪರಮೇಶ್ವರಪ್ಪ, ಉಪಾಧ್ಯಕ್ಷೆ ಮಂಗಳಾ ಇತರರು ಉಪಸ್ಥಿತರಿದ್ದರು.
ರೈತರೆ ನಿಮ್ಮ ಖಾತೆಗೆ ಹಣ ಜಮ ಆಗಿದೆಯಾ ಇಲ್ವಾ ? ಹಾಗಿದ್ರೆ ಈ ರೀತಿ ಮಾಡಿ