ಪಾಕ್ ಮೇಲೆ ಕಣ್ಣಿಡಬೇಕೆಂದ ಕಮಲಾ ಹ್ಯಾರಿಸ್..!

www.karnatakatv.net: ಭಯೋತ್ಪಾದಕರಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದ್ದು ಈ ಬಗ್ಗೆ ಸೂಕ್ಷ್ಮ ವಾಗಿ ಗಮನಿಸಬೇಕು ಅಂತ ಪ್ರಧಾನಿ ಮೋದಿಗೆ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ನಿನ್ನೆ ಅಮೆರಿಕಾದಲ್ಲಿ ಮೋದಿ, ಕಮಲಾ ಹ್ಯಾರಿಸ್ ಮತ್ತು ಅವರ ನಿಯೋಗವನ್ನು ಭೇಟಿ ಮಾಡಿದ್ದರು. ಈ ವೇಳೆ ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ, ತಾಲಿಬಾನ್ ಆಡಳಿತ ಸೇರಿದಂತೆ ಉಭಯ ರಾಷ್ಟ್ರಗಳ ಭದ್ರತೆ ಕುರಿತಾಗಿ  ಚರ್ಚಿಸಿದ್ರು. ಈ ವೇಳೆ ಪಾಕಿಸ್ತಾನದ ಬಗ್ಗೆ ಮಾತನಾಡಿದ ಕಮಲ ಹ್ಯಾರಿಸ್, ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಬಗ್ಗೆ ಸೂಕ್ಷ್ಮವಾಗಿ ಪರಿಸ್ಥಿತಿ ಮತ್ತು ಆಗುಹೋಗುಗಳನ್ನು ಗಮನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ತಿಳಿಸಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಉಗ್ರರ ಜಾಲ ಸಕ್ರಿಯವಾಗಿದೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಕಮಲಾ ಹ್ಯಾರಿಸ್ ಪಾಕ್ ಗೆ ಒತ್ತಾಯಿಸಿದ್ದಾರೆ.

About The Author