ಹುಬ್ಬಳ್ಳಿ: ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಆಟೋ ಚಾಲಕರಿಗೆ ಕೆಲಸವೇ ಇಲ್ಲದಂತಾಗಿದೆ ಪ್ರತಿಯೊಂದಕ್ಕೂ ಆಟೋದ ಮೇಲೆ ಅವಲಂಬಿತವಾಗಿದ್ದಂತಹ ಮಹಿಳೆಯರು ಉಚಿತ ಬಸ್ ಪ್ರಯಾಣ ಶುರುವಾಗಿನಿಂದ ಮಹಿಳೆಯರು ಆಟೋದ ಕಡೆ ಮುಖ ಮಾಡುತ್ತಿಲ್ಲ.
ಶಕ್ರಿಯೋಜನೆಯಿಂದಾಗಿ ಆಧಾಯವಿಲ್ಲದೆ ಪ್ರತಿದಿನ ಬರಿಗೈಯಲ್ಲಿ ಹೋಗುತ್ತಿರುವ ಆಟೋ ಚಾಲಕರು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಆಟೋ ಚಾಲಕರ ಸಂಘ ಹುಬ್ಬಳ್ಳಿ ದಾರವಾಡ ಆಟೊ ರಿಕ್ಷಾ ಚಾಲಕರ ಸಂಘದಿಂದ ಬಂದ್ ಗೆ ಕರೆ ಕೊಟ್ಟಿದ್ದಾರೆ.ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ಮಾಡುತ್ತಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಆಟೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಲವು ಸಂಘ ಸಂಸ್ಥೇಗಳು ಈ ಬಂದ ಬೆಂಬಲಲ ಸೂಚಿಸಿದ್ದಾರೆ.ಶಕ್ತಿ ಯೋಜನೆಯನ್ನ ರದ್ದು ಮಾಡಿ, ನಮ್ಮನ್ನ ರಕ್ಷಿಸಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಆಟೋ ಚಾಲಕರು, ಮಾಲೀಕರಿಂದ ಪ್ರತಿಭಟನೆ ಕೈಗೊಂಡಿದ್ದಾರೆ.
Love story:ಪ್ರೀತಿಸಿದ ಯುವತಿಯನ್ನು ಬೆತ್ತಲೆಗೊಳಿಸಿದ ಪ್ರಿಯಕರನ ಪೋಷಕರು