ಇಂದು ನೇಮಕಾತಿ ಆಗ್ರಹಿಸಿ ನಡೆಯಬೇಕಿದ್ದ ವಿದ್ಯಾರ್ಥಿ ಪ್ರತಿಭಟನೆ ರದ್ದು!

ನೇಮಕಾತಿ ಆಗ್ರಹಿಸಿ ಧಾರವಾಡದಲ್ಲಿ ಇಂದು ನಡೆಯಬೇಕಾಗಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಪೊಲೀಸರ ಮುನ್ನೆಚ್ಚರಿಕೆ ಕ್ರಮಗಳ ಕಾರಣ ರದ್ದು ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ತೀವ್ರ ಬಂದೋಬಸ್ತ್ ಹಾಕಿ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಧಾರವಾಡದ ಶ್ರೀನಗರ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿ ಬಂದೋಬಸ್ತ್ ಮಾಡಿದ್ದಾರೆ.

ಪ್ರದೇಶವನ್ನು ಕರ್ಫ್ಯೂಹಾಗೆ ತಯಾರಿಸಿದ್ದಾರೆ. ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೀಡಿದ್ದ ಪ್ರತಿಭಟನೆ ಕರೆಯನ್ನು ಅನುಸರಿಸಿ, ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ನಿರಾಕರಿಸಿದೆ. ಪೊಲೀಸರು ಸ್ಥಳದಲ್ಲಿ ವ್ಯಾಪಕ ನಿಯೋಜನೆ ಮಾಡಿಕೊಂಡು, ಯಾವುದೇ ಬಿಕ್ಕಟ್ಟು ಇದ್ರೂ ಅದನ್ನ ತಡೆಯಲು ಸಕ್ರೀಯತೆಯನ್ನು ತೋರಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author