Saturday, May 25, 2024

Latest Posts

ನೇಹಾ ಹತ್ಯೆ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿ ಶಕ್ತಿ: ಧಾರವಾಡ ಜ್ಯುಬಿಲಿ ವೃತ್ತ ಬಂದ್

- Advertisement -

Dharwad News: ಧಾರವಾಡ: ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿ ಶಕ್ತಿ ಬೀದಿಗಿಳಿದು ಹೋರಾಟ ನಡೆಸಿದೆ. ಧಾರವಾಡದ ಪ್ರಮುಖ ವೃತ್ತವಾದ ಆಲೂರು ವೆಂಕಟರಾವ್ ವೃತ್ತವನ್ನು ಬಂದ್ ಮಾಡಿದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಕೆಲ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನೇಹಾಳನ್ನು ಹತ್ಯೆ ಮಾಡಿದ ಫಯಾಜ್‌ನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು. ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು ಜ್ಯುಬಿಲಿ ವೃತ್ತವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಕೆಲ ಕಾಲ ಅಡಚಣೆ ಉಂಟಾಯಿತು. ಈ ವೇಳೆ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು.

ರಸ್ತೆ ಬಂದ್ ಮಾಡಲು ಅವಕಾಶವಿಲ್ಲ. ನೀವು ರಸ್ತೆ ಬಂದ್ ಮಾಡುವ ಹಾಗಿಲ್ಲ ಎಂದು ಪೊಲೀಸರು ಎಬಿವಿಪಿ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಇದರಿಂದ ಕಂಗಾಲಾದ ಕಾರ್ಯಕರ್ತರು ನಾವು ಐದು ನಿಮಿಷಗಳ ಕಾಲ ರಸ್ತೆ ಬಂದ್ ಮಾಡುತ್ತೇವೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಕೆಲ ಕಾಲ ಜ್ಯುಬಿಲಿ ವೃತ್ತವನ್ನು ಬಂದ್ ಮಾಡಿದ ವಿದ್ಯಾರ್ಥಿಗಳ ಮನವೊಲಿಸಿದ ಪೊಲೀಸರು ಅಲ್ಲಿಂದ ಅವರನ್ನು ತಹಶೀಲ್ದಾರ ಕಚೇರಿಗೆ ಕರೆದುಕೊಂಡ ಹೋದರು. ನೇಹಾ ಹತ್ಯೆ ಖಂಡಿಸಿ ಇದೀಗ ವಿದ್ಯಾರ್ಥಿ ಶಕ್ತಿ ರಸ್ತೆಗಿಳಿದಿದ್ದು, ಹಂತಕ ಫಯಾಜ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದೆ.

ನೇಹಾ ತುಂಬಾ ಒಳ್ಳೆಯ ಹುಡುಗಿ : ಅವಳೇ ಮೊದಲು ಪ್ರಪೋಸ್ ಮಾಡಿದ್ದು: ಫಯಾಜ್ ತಾಯಿ ಮುಮ್ತಾಜ್

ನನ್ನ ಮಗಳ ಆತ್ಮಕ್ಕೆ ಶಾಂತಿ ಕೊಡಿಸುವ ಶಕ್ತಿ ಬೇರೆ ಯಾರ ಬಳಿ ಇಲ್ಲ, ನೀವೇ ಸಹಾಯ ಮಾಡಿ: ಜೋಶಿ ಬಳಿ ನೇಹಾ ತಂದೆ ಮನವಿ

ನೇಹಾ ಹ* ಕೇಸ್: ಫಯಾಜ್ ರುಂ*ಡ ಚೆಂಡಾಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

- Advertisement -

Latest Posts

Don't Miss