Tuesday, April 15, 2025

Latest Posts

ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ

- Advertisement -

ಪೊಂಗ್ಯಾOಗ್: ದಕ್ಷಿಣ ಕೊರಿಯಾ ಸಿನಿಮಾ ವೀಕ್ಷಿಸುವುದನ್ನು ಉತ್ತರ ಕೊರಿಯಾ ನಿಷೇಧಿಸಿದೆ. ಇಬ್ಬರು ವಿದ್ಯಾರ್ಥಿಗಳು ದಕ್ಷಿಣ ಕೊರಿಯಾದ ಡ್ರಾಮವನ್ನು ವೀಕ್ಷಿಸಿದ್ದಾರೆಂದು ಆ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿದ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ. ಉತ್ತರ ಕೊರಿಯಾದಲ್ಲಿ ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳು ಶಾಲೆಯ ಕೋಣೆಯೊಂದರಲ್ಲಿ ಡ್ರಾಮಾ ವೀಕ್ಷಿಸದ್ದರಿಂದ ಅವರನ್ನು ಬಂಧಿಸಿ ವಾಯುನೆಲೆಯ ಮೈದಾನದಲ್ಲಿ ಸ್ಥಳೀಯರ ಎದುರು ಗಲ್ಲಿಗೇರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಉತ್ತರ ಕೊರಿಯಾದ ರಿಯಾಂಗ್ ಗಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.

ಮುಂದುವರೆದ ಬಿಜೆಪಿ ಕೆಪಿಸಿಸಿ ಟ್ವೀಟ್ ವಾರ್

ಈ ಭಾಗವು ಚೀನಾದ ಗಡಿ ಭಾಗದ ಹತ್ತಿರವಿರುವುದರಿಂದ ಈ ಭಾಗದಲ್ಲಿ ಸುಲಭವಾಗಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಸಿನಿಮಾಗಳು ಸುಲಭವಾಗಿ ಸಿಗುತ್ತವೆ. ಈ ಹಿನ್ನೆಲೆ ಇಬ್ಬರು ವಿದ್ಯಾರ್ಥಿಗಳಿಗೆ ಕೆ-ಡ್ರಾಮಾ ದೊರೆತಿದ್ದರಿಂದ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಅಕ್ಟೋಬರ್ ತಿಂಗಳಲ್ಲಿ ಬಾಲಕರನ್ನು ಗಲ್ಲಿಗೇರಿಸಲಾಗಿತ್ತು. ಈ ಸುದ್ದಿ ಕಳೆದ ವಾರ ಬೆಳಕಿಗೆ ಬಂದಿದೆ. ಬಾಲಕರು ದುಷ್ಕೃತ್ಯವೆಸಗಿದ್ದಾರೆ ಹೀಗಾಗಿ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ಉತ್ತರ ಕೊರಿಯಾ ತಮ್ಮ ನಿರ್ಧಾರವನ್ನು ಸಮರ್ಥಸಿಕೊಮಡಿದೆ. ತಾವು ವೀಕ್ಷಿಸಿದ ದಕ್ಷಿಣ ಕೊರಿಯಾ ಕೆ-ಡ್ರಾಮಾವನ್ನು ಇಬ್ಬರು ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೂ ನೀಡಿದ್ದಾರೆ. ಆದರೆ ಉತ್ತರ ಕೊರಿಯಾದಲ್ಲಿ ದಕ್ಷಿಣ ಕೋರಿಯಾದ ಸಿನಿಮಾ, ಡ್ರಾಮಾವನ್ನು ವೀಕ್ಷಿಸುವುದು ಕಾನೂನು ಬಾಹಿರವಾಗಿರುವುದರಿಂದ ಕಿಮ್ ಜಾಂಗ್ ಉನ್ ಸರ್ಕಾರ ಆ ಇಬ್ಬರು ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಿದ್ದಾರೆ.

ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣ : ಸುಮಾರು 12 ಕರವೇ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು

ಮುಂದುವರೆದ ಬಿಜೆಪಿ ಕೆಪಿಸಿಸಿ ಟ್ವೀಟ್ ವಾರ್

- Advertisement -

Latest Posts

Don't Miss