ಹಾಸನ: ಬಾಳ್ಳುಪೇಟೆಯಲ್ಲಿ ಅಸಮರ್ಪಕ ಬಸ್ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಸೂಕ್ತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲಾಗದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದು ಸೂಕ್ತ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಧರ್ಭದಲ್ಲಿ ಬಾಳ್ಳುಪೇಟೆ ಗ್ರಾ.ಪಂ ಅಧ್ಯಕ್ಷರು ಮಾತನಾಡಿ ಬಾಳ್ಳುಪೇಟೆ ಗ್ರಾಮಕ್ಕೆ ಸರಿಯಾಗಿ ಬಸ್ ಗಳು ಬರುತ್ತಿಲ್ಲ. ಹಲವು ಬಸ್ ಗಳು ಬೈಪಾಸ್ ಮೂಲಕ ಹೋಗುತ್ತಿವೆ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಪ್ರತಿಭಟನೆ ನಡೆದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಡಿಪೋ ವ್ಯವಸ್ಥಾಪಕರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು, ಮತ್ತು ಹೆಚ್ಚಿನ ಬಸ್ ಗಳನ್ನು ಸಕಲೇಶಪುರದಿಂದ ಹಾಸನ ಮಾರ್ಗದಲ್ಲಿ ಬಿಡಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.
ಸೆಟ್ಟೇರಿತು ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾ – ಗ್ಯಾಂಗ್ ಸ್ಟಾರ್ ಅವತಾರ ತಾಳಲಿದ್ದಾರೆ ಕ್ರೇಜಿ ಸ್ಟಾರ್ ಪುತ್ರ
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್‌ಗೆ ಬಾಂಬೆ ಹೈಕೋರ್ಟ್‌ನಿಂದ ಜಾಮೀನು