Friday, July 4, 2025

Latest Posts

ಬಸ್‌ ನಿಲುಗಡೆಗಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

- Advertisement -

Dharwad News: ಧಾರವಾಡ: ಬಸ್‌ ನಿಲುಗಡೆಗಾಗಿ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಧಾರವಾಡದ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಅಮರಗೋಳ ಕ್ರಾಸ್ ಬಳಿ ಹಲವು ಬಾರಿ ಬಸ್ ನಿಲ್ಲಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೂ ಕೂಡ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಗ್ರಾಮಸ್ಥರ ಮನವಿಯನ್ನು ಆಲಿಸಲೇ ಇಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಪ್ರತಿದಿನ ವಿದ್ಯಾರ್ಥಿಗಳು, ದಿನಗೂಲಿ ನೌಕರರಿಗೆ ತೊಂದರೆಯುಂಟಾಗಿದೆ. ಈ ಹಿನ್ನೆಲೆ ಇಂದು ಅಮರಗೋಳ ಕ್ರಾಸ್ ಬಳಿ ರಸ್ತೆ ಬಂದ್ ಮಾಡಿ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಇನ್ನು ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಕೂಡ ಸಾಥ್ ಕೊಟ್ಟಿದ್ದು, ಅವರೂ ಕೂಡ ಪ್ರತಿಭಟನೆ ನಡೆಸಿದ್ದಾರೆ. ನೂರಾರು ವಾಹನಗಳನ್ನು ತಡೆದು, ಬಸ್ ನಿಲುಗಡೆಗೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನವಲಗುಂದ ಪೊಲೀಸರು, ಪ್ರತಿಭಟನೆ ನಿಲ್ಲಿಸಿ, ಮಾತುಕತೆ ನಡೆಸಿದ್ದಾರೆ.

- Advertisement -

Latest Posts

Don't Miss