Monday, May 12, 2025

Latest Posts

ಮಕ್ಕಳಿಗೆ ಪಠ್ಯದ ಜೊತೆ ಸಾಮಾಜಿಕ ಪ್ರಜ್ಞೆ ಕೂಡ ಇರಲಿ : ಎಸ್ಪಿ ಹರಿರಾಮ್ ಶಂಕರ್

- Advertisement -

ಹಾಸನ: ಮಕ್ಕಳು ಪಾಠ ಪ್ರವಚನದ ಜೊತೆ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜದಲ್ಲಿ ನಡೆಯುವ ಅಪರಾಧವನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಜೊತೆ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು. ನಗರದ ಹೊಸಲೈನ್ ರಸ್ತೆ ಬಳಿ ಇರುವ ಪೊಲೀಸ್ ವಸತಿ ಗೃಹದ ಸಮುದಾಯ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಬುಧವಾರದಂದು ಸ್ಟೂಡೆಂಟ್ ಪೊಲೀಸ್ ಕೆಡಿಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಿಭಿನ್ನ ಕಥಾಹಂದರವುಳ್ಳ ಚಿತ್ರ ‘2ND ಲೈಫ್’

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಪಿ ನೀವೆಲ್ಲಾ ಸೋಪರ್ ಹೀರೋ ಇದ್ದೀರಿ  ಕರ್ನಾಟಕ ಸರಕಾರದ ಆದೇಶದಂತೆ ಪ್ರತಿ ಜಿಲ್ಲೆಯಲ್ಲೂ ಶಾಲೆಗಳನ್ನು ಗುರುತಿಸಿ ಪೊಲೀಸ್ ಕೆಲಸ ಹೇಗೆ ಇರುತ್ತದೆ ಜೊತೆಗೆ ಒಬ್ಬ ಸಮಾಜದಲ್ಲಿ ಹೇಗೆ ನಾಗರೀಕರಾಗಿರಬೇಕೆಂಬುದರ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಹಾಸನದಲ್ಲಿ ಈಗಾಗಲೇ ೨೦ ಶಾಲೆಗಳ್ನು ಆಯ್ಕೆ ಮಾಡಲಾಗಿದೆ. ಪ್ರತಿ ಶಾಲೆಯಲ್ಲಿರುವ ಮಕ್ಕಳಿಗೆ ಪ್ರಥಮ ಹಂತದಲ್ಲಿ ಕರಾಟೆ ಹಾಗೂ ಸ್ವಯಂ ಪ್ರೇರಿತ ರಕ್ಷಣೆ ಕುರಿತು ಆಯೋಜಿಸಲಾಗುತ್ತಿದೆ ಎಂದು ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬಿದರು.

ಸಿಎಂ ಅಣಕು ಶವಯಾತ್ರೆ ಮಾಡಿ ಪ್ರತಿಭಟಿಸುತ್ತಿರುವ ಮಂಡ್ಯ ರೈತರು

ಕೆಲ ಶಾಲೆಗಳಲ್ಲಿ ಮಾದಕ ವಸ್ತುಗಳ, ಆಲ್ಕೋ ಹಾಲ್, ಡ್ರಗ್ಸ್ ಬಗ್ಗೆ ಏನಾದರೂ ಸಮಸ್ಯೆ ಬಂದರೇ ಹೆದರದೇ ನಮಗೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು. ನಮ್ಮ ಶಾಲೆಗಳಲ್ಲಿರುವ ಸಮಸ್ಯೆಗಳನ್ನು ನಾವೆ ಬಗೆಹರಿಸೋಣ, ಪೊಲೀಸ್ ಇಲಾಖೆ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಳ್ಳೋಣ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಎಸ್ಪಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪ್ರಕಾಶ್ ಮಾತನಾಡಿ, ನಮ್ಮ ಶಾಲೆಗಳಲ್ಲಿ ಕೇವಲ ಪಠ್ಯ ಪುಸ್ತಕಗಳಿಗೆ ಅಷ್ಟೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಕೂಡ ಬೆಳೆಸಬೇಕು ಎಂಬುದು ಉದ್ದೇಶವಾಗಿದೆ ಎಂದರು. ವಿದ್ಯಾರ್ಥಿ ದೆಸೆಯಿಂದಲೇ ಜಾಗೃತಿ ಆದರೇ ಮುಂದೆ ಉತ್ತಮ ಸಮಾಜ ಕಟ್ಟಬಹುದು. ಆಯ್ಕೆ ಮಾಡಲಾಗಿರುವ ೨೦ ಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡಿಟ್ ಯಶಸ್ವಿಯಾದರೇ ಮುಂದೆ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

- Advertisement -

Latest Posts

Don't Miss