ಆ.31ರವರೆಗೆ ವಿದ್ಯಾರ್ಥಿಗಳಿಗೆ KSRTC ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿಗಳ ಬಸ್ ಪಾಸುದಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ, ಅಂತಿಮ ಸಮಿಸ್ಟರ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಕ್ಟೋಬರ್ 31ರವರೆಗೆ 2021-22ನೇ ಸಾಲಿನ ಪಾಸ್ ಹಾಗೂ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಇನ್ನುಳಿದ ಇತರೆ ಸೆಮಿಸ್ಟರ್, ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಸೇವಾಸಿಂಧು ಮುಖೇನ ಹೊಸದಾಗಿ ಪಾಸ್ ಪಡೆಯುವವರೆಗೆ ಹಳೆ ಪಾಸ್ ಅಥವಾ ಅವಧಿ ವಿಸ್ತರಣೆ ರಸೀದಿ ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.

About The Author