ಹುಬ್ಬಳ್ಳಿ: ನಗರದ ಪೊಲೀಸರಿಗೆ ಪ್ರಕರಣಗಳ ಸುರಿಮಳೆನೇ ಸುರಿಯುತ್ತಿದ್ದು ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಯುವಕನನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣ ತನಿಖೆಯಲ್ಲಿರುವ ಹೊತ್ತಲ್ಲೆ ಮತ್ತೊಂದು ಪ್ರಕರಣ ತಲೆದೂರಿದೆ.
ಹುಬ್ಬಳ್ಳಿಯ ಖಾಸಗಿ ಕಾಲೇಜು ಒಂದರಲ್ಲಿ ಕಿಡಿಗೇಡಿಗಳು ವಿದ್ಯಾರ್ಥಿನಿಯರ ಪೋಟೋಗಳನ್ನು ಬಳೆಸಿಕೊಂಡು ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್ ಮಾಡಿರುವ ಪ್ರಕರಣ ದಾಖಲಾಗಿದೆ. ಕಳೆದ ಮೂರು ತಿಂಗಳ ಹಿಂದೆಯೇ ಇಂತಹದ್ದೊಂದು ಅಹಿತಕರ ಘಟನೆ ನಡೆದಿದ್ದು ಇದನ್ನು ಕಾಲೇಜು ಆಡಳಿತ ಮಂಡಳಿಗೆ ವಿದ್ಯಾರ್ಥಿಗಳು ವಿಷಯ ತಿಳಿಸಿದ್ದರೂ ಹುಡುಗಿಯರ ಮಾನ ಹಾಳಾಗಿ ಹೋಗುತ್ತೆ ಅಂತ ಇದನ್ನು ಮುಚ್ಚಿಟ್ಟು ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿತ್ತು ಆದರೆ ಈಗ ಮತ್ತೋಮ್ಮೆ ಅಂತಹುದ್ದೇ ಘಟನೆ ನಡೆದು ವಿದ್ಯಾರ್ಥಿನಿಯರ ಮಾನ ಹರಾಜು ಹಾಕಿದ್ದಾರೆ.
ವಿದ್ಯಾರ್ಥಿನಿಯರಿಗೆ ರಕ್ಷಣೆ ಒತ್ತು ಕೊಡದೆ ಅವರ ಭವಿಷ್ಯದೊಂದಿಗೆ ಚೆಲ್ಲಾಟ ಆಡಿತ್ತಿದೆ.ಹಾಗಿದ್ದರೆ ಕಾಲೇಜು ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲವಾ ಎಂಬುದೇ ಪೋಷಕರಿಗೆ ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ.ಈ ರೀತಿ ನಿರ್ಲಕ್ಷ ತೋರುತ್ತಿರುವ ಕಾಲೇಜಿನ ಆಡಳಿತ ಮಂಡಳಿ ಬಗ್ಗೆ ಪೋಲೀಸ್ ಆಯುಕ್ತರು ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ.ಇಷ್ಟೇ ಅಲ್ಲದೆ ಇನ್ಯಾವ ರೀತಿ ವಿದ್ಯಾರ್ಥಿಗಳ ಮಾನ ಹರಾಜು ಹಾಕಲು ಕಿಡಿಗೇಡಿಗಳು ಸಂಚು ರೂಪಿಸಿದ್ದಾರೆ ಎಂದು ಭಯಭೀತರಾಗಿದ್ದಾರೆ.
Fridge : ಪ್ರಿಡ್ಜ್ ಗಾಗಿ ಹೋಯಿತು ಗರ್ಭಿಣಿ ಪ್ರಾಣ…! ಕೊಂದೇ ಬಿಟ್ಟ ಪಾಪಿಗಳು..!



