Tuesday, August 5, 2025

Latest Posts

‘ಸು ಫ್ರಮ್ ಸೋ’ ಸೂಪರ್ ಹಿಟ್ – ಎಷ್ಟು ಕೋಟಿ ಗಳಿಕೆ?

- Advertisement -

ಕನ್ನಡದ ಹೊಸ ಸಿನಿಮಾ ‘ಸು ಫ್ರಮ್ ಸೋ’ ಈಗ ತಗ್ಗೋ ಮಾತೇ ಇಲ್ಲ ಅನ್ನೋ ಹಾಗೆ ನೇರವಾಗಿ 50 ಕೋಟಿ ಕ್ಲಬ್ ತಲುಪೋ ದಿಕ್ಕಿನಲ್ಲಿ ಸಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರ ಜನಪ್ರಿಯವಾಗಿದೆ. ಮಲಯಾಳಂ ಭಾಷೆಯಲ್ಲಿ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ. ಸಣ್ಣ ಬಜೆಟ್‌ನ ಚಿತ್ರ ಇಷ್ಟು ದೊಡ್ಡ ಯಶಸ್ಸು ಕಾಣುತ್ತಿರುವುದು ಅಚ್ಚರಿಯ ಸಂಗತಿ.

‘ಸು ಫ್ರಮ್ ಸೋ’ ಈ ಹೆಸರು ಕೇಳಿದಾಗಲೇ ಕನ್ನಡ ಪ್ರೇಕ್ಷಕರ ಕಣ್ಣು ಕಂಗೊಳಿಸುತ್ತಿದೆ. ರಾಜ್ ಬಿ. ಶೆಟ್ಟಿ ನಿರ್ಮಿಸಿರುವ ಈ ಚಿತ್ರಕ್ಕೆ ಜೆಪಿ ತುಮ್ಮಿನಾಡ್ ನಿರ್ದೇಶನ ಮಾಡಿದ್ದಾರೆ. ಚಿತ್ರ ಸಣ್ಣ ಬಜೆಟ್‌ನಲ್ಲಿ ಸಿದ್ಧವಾದರೂ, ಅದ್ಭುತ ಕತೆ, ನಿರೂಪಣೆ, ಮತ್ತು ಭಾವನಾತ್ಮಕ ದೃಶ್ಯಗಳು ಈ ಸಿನಿಮಾವನ್ನು ವಿಶಿಷ್ಟವಾಗಿಸುತ್ತವೆ.

ಇದೀಗ ಈ ಚಿತ್ರ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದ ಸೋಮವಾರವೂ 3.5 ಕೋಟಿ ರೂ. ಗಳಿಕೆ ಮಾಡಿದೆ. ಒಟ್ಟಾರೆ 40 ಕೋಟಿ ರೂಪಾಯಿಯ ಪ್ರದರ್ಶನವಾಗಿದೆ. ಪ್ರೀಮಿಯರ್ ಶೋಗಳಲ್ಲಿ ಸಿನಿಮಾ ಮೆಚ್ಚುಗೆ ಗಳಿಸಿದೆ. ಜನರ ಪ್ರೀತಿಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು, ಡೈಲಾಗುಗಳು ಟ್ರೆಂಡಿಂಗ್‌ ಆಗಿವೆ. ಪ್ರೀಮಿಯರ್ ಶೋಗಳು ಹಾಗೂ ಅಭಿಮಾನಿಗಳ ಬೆಂಬಲ ಮುಖ್ಯ ಪಾತ್ರ ವಹಿಸಿವೆ.

‘ಸು ಫ್ರಮ್ ಸೋ’ ಸಿನಿಮಾ ಈಗ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ‘ಪುಷ್ಪ’ ಸರಣಿಯನ್ನು ನಿರ್ಮಾಣ ಮಾಡಿದ ‘ಮೈತ್ರಿ ಮೂವೀ ಮೇಕರ್ಸ್’ ಈ ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡುವ ಜವಾಬ್ದಾರಿ ಹೊತ್ತುಕೊಂಡಿದೆ. ಈಗಾಗಲೇ ಚಿತ್ರದ ಟ್ರೇಲರ್ ಸಿದ್ಧವಾಗಿ ಬಿಡುಗಡೆ ಕಂಡಿದೆ. ಆಗಸ್ಟ್ 8ರಂದು ಸಿನಿಮಾ ಥಿಯೇಟರ್‌ನಲ್ಲಿ ತೆರೆಗೆ ಬರಲಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss