Saturday, May 10, 2025

Latest Posts

ಇಂಥ ಕೆಳಮಟ್ಟದ ರಾಜಕೀಯ ಹಿಂದೆಂದೂ ಆಗಿರಲಿಲ್ಲ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ. ವಿರೋಧ ಪಕ್ಷ ಹಣಿಯಲು ಹಲವಾರು ಕೇಸ್ ಹಾಕುತ್ತಾರೆ. ಸ್ವಜನ ಪಕ್ಷಪಾತ ತನಿಖೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುವ ಮಟ್ಟಕ್ಕಿಳಿದಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯದಲ್ಲಿ ರಕ್ಷಣೆ ಇರುವ ಕಾರಣ ಅಧಿಕಾರಿಗಳಿಂದ ಈ ರೀತಿ ಮಾತು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೇಂದು ಆಗಲಿಲ್ಲ. ತಮ್ಮ ಮೇಲೆ ಆರೋಪದ ಕಪ್ಪು ಚುಕ್ಕೆ ಬಂದ್ರೆ ಎಲ್ಲರಿಗೂ ಮಸಿ ಬಳಿಯುವ ಪ್ರಯತ್ನ ಆಗುತ್ತಿದೆ. ಇದು ಬಹಳಷ್ಟು ದಿನ ನಡೆಯೊದಿಲ್ಲಾ. ಅಂತಿಮವಾಗಿ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಯತ್ನಾಳಗೆ ಯಾವ ಮಾಹಿತಿಯಿದೆ ಅವರನ್ನೇ ಕೇಳಬೇಕು ನನಗೇನು ಮಾಹಿತಿ..? ಅವರ ಬಗ್ಗೆ ಕಾಮೆಂಟ್ ಮಾಡೋದಿಲ್ಲಾ. ಅದನ್ನು ಅವರಿಗೆ ಕೇಳಿ. ಮುಡಾ ಹಗರಣದಲ್ಲಿ ದೂರು ಇಡಿಗೆ ಹೋಗಿದ್ದಾರೆ. ಕಾದು ನೋಡೋಣ ಏನು ಆಗುತ್ತೆ ಅಂತ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

Latest Posts

Don't Miss