State News:
ಪುನೀತ್ ಪರ್ವಕ್ಕೆ ಕ್ಷಣಗಣನೆ ಶುರುವಗಿದೆ. ಇದೀಗ ಆ ಇಬ್ಬರು ನಟರು ಈ ಕಾರಣದಿಂದಲಾದರೂ ಒಂದಾಗ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡುತ್ತಿದೆ. ಹಾಗಿದ್ರೆ ಯಾರು ಆ ನಟರು ಏನೀ ಕುತೂಹಲ..? ಹೇಳ್ತೀವಿ ಈ ಸ್ಟೋರಿಯಲ್ಲಿ….
ಕನ್ನಡ ಚಿತ್ರರಂಗದಲ್ಲಿ ಸ್ನೇಹ ಎಂದಾಕ್ಷಣ ನೆನಪಾಗುತ್ತಿದ್ದದ್ದು ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್. ಅವರಿಬ್ಬರ ನಂತರ ಅದೇ ರೀತಿಯಯಲ್ಲಿ ಆಪ್ತಮಿತ್ರರಾಗಿದ್ದ ಸೂಪರ್ ಸ್ಟಾರ್‌ಗಳು ದರ್ಶನ್ ಹಾಗೂ ಸುದೀಪ್. ಕುಚಿಕು ಗೆಳೆಯರನ್ನು ನೋಡಿ ಅಭಿಮಾನಿಗಳು ಕೂಡ ಖುಷಿಪಡುತ್ತಿದ್ದರು. ಸಾಕಷ್ಟು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಬಿಡುವಿನ ಸಮಯದಲ್ಲಿ ಸ್ನೇಹಿತರ ಜೊತೆ ಸೇರಿ ಊರೂರು ಸುತ್ತಾಡುತ್ತಿದ್ದರು. ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು. ಆದರೆ ಇವರ ಸ್ನೇಹದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಅಂದು ನಟ ದರ್ಶನ್ ಮಾಡಿದ್ದ ಅದೊಂದು ಟ್ವೀಟ್ ಕನ್ನಡ ಚಿತ್ರರಂಗಕ್ಕೆ ಶಾಕ್ ಕೊಟ್ಟಿತ್ತು.
2017 ಮಾರ್ಚ್ 17. ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಮರೆಯಲಾಗದ ದಿನ. ಅಂದು ಸಂಜೆ ನಟ ದರ್ಶನ್ ಒಂದು ಟ್ವೀಟ್ ಮಾಡಿದ್ದರು. “ನಾನು ಮತ್ತು ಸುದೀಪ್ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು” ಎಂದು ದರ್ಶನ್ಟ್ವೀಟ್ಮಾಡಿ ಸುದೀಪ್ ಜೊತೆಗಿನ ಸ್ನೇಹವನ್ನು ಕಡಿದುಕೊಂಡಿದ್ದರು. ಅಲ್ಲಿಗೆ ಆ ಸ್ನೇಹ ಮುರಿದು ಬಿದ್ದಿತ್ತು. ಆದರೆ ಮತ್ತೆ ಅವರಿಬ್ಬರು ಒಂದಾಗೋ ಕಾಲ ಕೂಡಿ ಬಂದಂತಿದೆ.ಸ್ಯಾಂಡಲ್‌ವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ವೇದಿಕೆ ಏರುತ್ತಾರಾ? ಅನ್ನೋದೇ ದೊಡ್ಡ ಕುತೂಹಲವಾಗಿದೆ. ದರ್ಶನ್ ಹಾಗೂ ಸುದೀಪ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳದೆ ಹಲವು ವರ್ಷಗಳೇ ಕಳೆದಿವೆ. ಈಗ ಪುನೀತ್ ರಾಜ್‌ಕುಮಾರ್‌ಗಾಗಿ ಇಬ್ಬರೂ ಒಂದೇ ವೇದಿಕೆ ಏರುತ್ತಾರಾ? ಅನ್ನೋದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಅಪ್ಪು ಅಭಿಮಾನಿಗಳು ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರಿಗೂ ಸ್ವಾಗತವನ್ನು ಕೋರಿದ್ದಾರೆ.
ಇನ್ನು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ ಈ ಕಾರ್ಯಕ್ರಮ ಪ್ರಮುಖ ಆಕರ್ಷಣೆ ಎನ್ನಲಾಗುತ್ತಿದೆ. ‘ಕೆಜಿಎಫ್ 2’ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರೋ ಯಶ್ ಕೂಡ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳಿದ್ದಾರೆ. ತಮ್ಮ ಮುಂದಿನ ಸಿನಿಮಾದಿಂದ ಬಿಡುವು ಮಾಡಿಕೊಂಡು ‘ಗಂಧದ ಗುಡಿ’ ಪ್ರಿ-ರಿಲೀಸ್ ಈವೆಂಟ್‌ಗೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.
ಒ್ಟಟ್ಟಾರೆ ಅಜಾತ ಶತ್ರು ಕರುನಾಡ ಕಣ್ಮಣಿ ಅಪ್ಪು ಹೆಸರಲ್ಲಾದರೂ ಸುದೀಪ್ ದರ್ಶನ್ ಒಂದಾಗ್ತಾರಾ ಒಂದೇ ವೇದಿಕೆಯಲ್ಲಿ ಸುದೀಪ್ ದರ್ಶನ್ ಯಶ್ ರವರನ್ನು ನೋಡೋ ಅಭಿಮಾನಿಗಳ ಆಸೆ ಈಡೇರುತ್ತಾ ಕಾದು ನೋಡ್ಬೇಕು….
ನರೇಶ್ ಪತ್ನಿಗೆ ನಡುಗಿದ್ರಾ ಪವಿತ್ರಾ ಲೋಕೇಶ್..? ನರೇಶ್ ಪವಿತ್ರಾ ಲೋಕೇಶ್ ನಡುವೆ ಬ್ರೇಕಪ್ ಆಯ್ತಾ..?!