Monday, December 23, 2024

Latest Posts

‘ಹಾಸ್ಟೆಲ್ ಹುಡುಗರ’ ಹಾವಳಿಗೆ ನಸು ನಕ್ಕ ಕಿಚ್ಚ… ಬುರ್ಜ್ ಖಲೀಫ್ ಗೂ ಎತ್ತರದಲ್ಲಿ ಟೀಸರ್ ಲಾಂಚ್…

- Advertisement -

ಒಂದು ಸಿನಿಮಾದಲ್ಲಿ ಪ್ರಮೋಷನ್ ವಿಧಾನ ಇದೀಯಲ್ಲ ಅದು ಬಹಳ ಮುಖ್ಯ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾ ಇಲ್ಲೊಂದು ಸಿನಿಮಾ ಮಾಡ್ತಿರುವ ಪ್ರಮೋಷನ್ ನೋಡಿ ಗಾಂಧಿನಗರ ಫಿದಾ ಆಗಿದೆ. ಅಷ್ಟಕ್ಕೂ ಇಷ್ಟೆಲ್ಲಾ ಹಾವಳಿ ಎಬ್ಬಿಸಿರುವುದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ.

ಮೌಂಟ್ ಎವರೆಸ್ಟ್ ನಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಚಳಿ ತೋರಿಸಿದ್ದ ಹಾಸ್ಟೆಲ್ ಹುಡುಗರು ಇದೀಗ ಡೈರೆಕ್ಟ್ ಆಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದಾರೆ.

ಅಪ್ಪು ಕೈಯಿಂದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಪೋಸ್ಟರ್ ರಿಲೀಸ್ ಮಾಡಿಸಿ, ‘ಇದನ್ನು ಬಿಡುಗಡೆ ಮಾಡೋಕೆ ಇಷ್ಟೆಲ್ಲ ಬಿಲ್ಡಪ್‌ ಬೇಕಾಗಿತ್ತಾ’ ಎಂಬ ಡೈಲಾಗ್ ಹೇಳಿಸಿ ಪ್ರೇಕ್ಷಕನ್ನು ನಕ್ಕು ನಲಿಸಿತ್ತು ಸಿನಿಮಾ ಟೀಂ.

ಈ ಬಾರಿ ಬುರ್ಜ್ ಖಲೀಫಾ ಮೇಲಿಂದ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದ್ದರು. ಅದರಂತೆ ಬುರ್ಜ್ ಖಲೀಫಾ ಮೇಲಿಂದ ಟೀಸರ್ ಬಿಡುಗಡೆಯಾಗಿದೆ. ಅದು ಕೂಡ ಚಂದ್ರನ ಅಂಗಳದಲ್ಲಿ ಎಂಬುದು ವಿಶೇಷ. ಮತ್ತೊಮ್ಮೆ ವಿಭಿನ್ನವಾಗಿ ಚಿತ್ರದ ತುಣಕನ್ನು ತೋರಿಸಿ ಹಾಸ್ಟೆಲ್ ಹುಡುಗರು ಮೋಡಿ ಮಾಡಿದ್ದಾರೆ. ಈ ಅದ್ಭುತ ಟೀಸರ್​ನ್ನು ಬಿಡುಗಡೆ ಮಾಡಿದ ಕಿಚ್ಚ ಸುದೀಪ್ ಕೂಡ ಹಾಸ್ಟೆಲ್ ಹುಡುಗರ ವಿಭಿನ್ನ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ. ಅಲ್ಲದೆ ಯುವ ತಂಡದ ವಿಭಿನ್ನ ಪ್ರಮೋಷನ್​ಗೆ ಅಭಿನಯ ಚಕ್ರವರ್ತಿ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

- Advertisement -

Latest Posts

Don't Miss